ನವದೆಹಲಿ: 70 ಸದಸ್ಯಬಲದ ದೆಹಲಿ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಬಿಜೆಪಿ 48 ಸ್ಥಾನಗಳನ್ನು ಗೆಲ್ಲುವ ಮೂಲಕ ಬಿಜೆಪಿ 25 ವರ್ಷಗಳ ಅಧಿಕಾರಕ್ಕೇರಿದ್ದು, ಆಡಳಿತರೂಢ ಎಎಪಿಗೆ ಭಾರೀ ಮುಖಭಂಗವಾಗಿದೆ. ಸೋಲಿಗೆ ಕಾರಣವಾದ ಅಂಶಗಳನ್ನು ಎಎಪಿ ನಾಯಕರು ಹುಡುಕಾಡುತ್ತಿರುವ ನಡುವೆಯೇ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಪಂಜಾಬ್ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ ಎಂಬ ವಿಚಾರ ಕೇಳಿ ಬಂದಿದ್ದು, ಕಾಂಗ್ರೆಸ್ (Congress) ನಾಯಕರು ನೀಡಿರುವ ಹೇಳಿಕೆ ರಾಷ್ಟ್ರ ರಾಜಕಾರಣದಲ್ಲಿ ಹೊಸ ಚರ್ಚೆಯನ್ನೇ ಹುಟ್ಟುಹಾಕಿದೆ.
ರಾಜ್ಯ ಎಎಪಿ ಘಟಕದ ಅಧ್ಯಕ್ಷ ಅಮನ್ ಅರೋರಾ ಹೇಳಿಕೆಯನ್ನು ಉಲ್ಲೇಖಿಸಿ ಮಾತನಾಡಿದ ವಿಪಕ್ಷ ನಾಯಕ ಪರತಾಪ್ ಸಿಂಗ್ ಬಾಜ್ವಾ, ಹಿಂದೂ ಕೂಡ ಪಂಜಾಬ್ನ ಮುಖ್ಯಮಂತ್ರಿಯಾಗಬಹುದಾಗಿದೆ. ಸಿಎಂ ಕುರ್ಚಿಯಲ್ಲಿ ಕೂರುವಂತಹ ವ್ಯಕ್ತಿ ಹಿಂದೂ ಅಥವಾ ಸಿಖ್‌ನ ಪ್ರಿಸ್ಮ್‌ನಲ್ಲಿ ನೋಡಬಾರದು ಆತ ಸಮರ್ಥವಾಗಿರಬೇಕು ಎಂದು ಅಮನ್ ಅರೋರಾ ಹೇಳಿಕೆಯನ್ನು ನೀಡಿದ್ದರು.
ದೆಹಲಿ ವಿಧಾನಸಭೆ ಚುನಾವಣೆ ಫಲಿತಾಂಶ ಪ್ರಕಟವಾಗುವ ಎರಡು ದಿನ ಮುಂಚೆ ಈ ಹೇಳಿಕೆ ಹೊರಬಿದ್ದಿದ್ದು, ಎಎಪಿ ನಾಯಕತ್ವವು ಕೇಜ್ರಿವಾಲ್ಗೆ ಹೇಗೆ ಪಂಜಾಬ್ ಸಿಎಂ ಆಗಲು ದಾರಿ ಮಾಡಿಕೊಡುತ್ತಿದೆ ಎಂಬುದಕ್ಕೆ ಸ್ಪಷ್ಟ ನಿದರ್ಶನವಾಗಿದೆ. ಲುಧಿಯಾನ ಕ್ಷೇತ್ರದ ಶಾಸಕರು ನಿಧನರಾಗಿರುವುದರಿಂದ ಉಪಚುನಾವಣೆಯಲ್ಲಿ ಅರವಿಂದ್ ಕೇಜ್ರಿವಾಲ್ ಅಲ್ಲಿಂದ ಸ್ಫರ್ಧಿಸಲಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಎಎಪಿ ನಾಯಕತ್ವವು ಈಗಾಗಲೇ ಎಲ್ಲವೂ ಸಿದ್ದಮಾಡಿಕೊಂಡಿದೆ.
ಒಂದು ವೇಳೆ ಅರವಿಂದ್ ಕೇಜ್ರಿವಾಲ್ ಏನಾದರು ಪಂಜಾಬ್ ರಾಜಕೀಯಕ್ಕೆ ಪ್ರವೇಶಿಸಿದರೆ ಸಿಎಂ ಭಗವಂತ್ ಮಾನ್ ಬಣದಿಂದ ಅಧಿಕಾರಕ್ಕಾಗಿ ಆಂತರಿಕ ಕಚ್ಚಾಟ ಶುರುವಾಗಲಿದೆ. ಹೀಗಾಗಿ ರಾಜ್ಯದಲ್ಲಿ ಮಧ್ಯಂತರ ಚುನಾವಣೆ ನಡೆದರೂ ಅಚ್ಚರಿಪಡಬೇಕಿಲ್ಲ ಎಂದು ಪಂಜಾಬ್ ವಿಧಾನಸಭೆ ವಿಪಕ್ಷ ನಾಯಕ ಪರತಾಪ್ ಸಿಂಗ್ ಬಾಜ್ವಾ ಹೇಳುವ ಮೂಲಕ ರಾಷ್ಟ್ರ ರಾಜಕಾರಣದಲ್ಲಿ ಹೊಸ ಚರ್ಚೆಯನ್ನ ಹುಟ್ಟುಹಾಕಿದ್ಧಾರೆ.
ದೆಹಲಿಯಲ್ಲಿ ಸೋಲುಂಡಿರುವ ಅರವಿಂದ್ ಕೇಜ್ರಿವಾಲ್ ಒಂದು ವೇಳೆ ಪಂಜಾಬ್ ರಾಜಕೀಯಕ್ಕೆ ಪ್ರವೇಶಿಸಿ ಅಲ್ಲಿನ ಮುಖ್ಯಮಂತ್ರಿಯಾದಲ್ಲಿ ಭಗವಂತ್ ಮಾನ್ ಬೆಂಬಲಿಗರು ಹಾಗೂ ರಾಷ್ಟ್ರೀಯ ನಾಯಕರ ನಡುವಿನ ಭಿನ್ನಾಭಿಪ್ರಾಯಗಳು ಮತ್ತಷ್ಟು ಹೆಚ್ಚಾಗಬಹುದು. ವಿಪಕ್ಷ ನಾಯಕರ ಹೇಳಿಕೆಗೆ ರಾಜ್ಯ ಕಾಂಗ್ರೆಸ್ (Congress) ನಾಯಕರು ಬೆಂಬಲ ಸೂಚಿಸಿದ್ದು, ಎಎಪಿ ವತಿಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.
ಹಾಡಹಗಲೇ ವಿದ್ಯಾರ್ಥಿನಿಯನ್ನು Kidnap ಮಾಡಿದ ಯುವಕರು; ಆರೋಪಿಗಳ ಫೋಟೋ ರಿಲೀಸ್, ವಿಡಿಯೋ ವೈರಲ್