ಕುಕ್ಕೆ ದೇವಳದಲ್ಲಿ ಸೇವೆ ವ್ಯತ್ಯಯ

kukke new
Published on

ಸುಬ್ರಹ್ಮಣ್ಯ: ಸೆ.7ರಂದು ಚಂದ್ರಗ್ರಹಣ ಇರುವುದರಿಂದ ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನಿತ್ಯ ಸೇವೆ, ದರ್ಶನಗಳಲ್ಲಿ ವ್ಯತ್ಯಯ ಉಂಟಾಗಲಿದೆ. ಆ ದಿನ ಮಧ್ಯಾಹ್ನದ ಮಹಾಪೂಜೆ ಬೆಳಗ್ಗೆ 11ಕ್ಕೆ ನಡೆಯಲಿದೆ. ರಾತ್ರಿ ಮಹಾಪೂಜೆ 5ಕ್ಕೆ ನೆರವೇರಲಿದೆ. ರಾತ್ರಿ ಭೋಜನ ಪ್ರಸಾದ, ಸಂಜೆ ಆಶ್ಲೇಷ ಬಲಿ ಸೇವೆ ಇರುವುದಿಲ್ಲ. ಭಾನುವಾರ ಸರ್ಪಸಂಸ್ಕಾರ ಸೇವೆ ಇರುವುದಿಲ್ಲ. ಸಂಜೆ 5ರಿಂದ ದರ್ಶನ , ಸೆ.8ರಂದು ಪಂಚಾಮೃತ ಮಹಾಭಿಷೇಕ ಸೇವೆ ಇರುವುದಿಲ್ಲ ಎಂದು ದೇವಳದ ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net