ನಾಲ್ಕು ಮನೆಗಳಲ್ಲಿ ಸರಣಿ ಕಳ್ಳತನ

New Project (11)
Published on

ಉಪ್ಪಿನಂಗಡಿ: ನೆಕ್ಕಿಲಾಡಿ ಗ್ರಾಮದ ಬೋಳಂತಿಲ ಎಂಬಲ್ಲಿ ಸರಣಿ ಕಳ್ಳತನ ನಡೆದಿದ್ದು, ಗುರುವಾರ ನಸುಕಿನ ಹೊತ್ತು ನಾಲ್ಕು ಮನೆಗಳಿಗೆ ನುಗ್ಗಿದ ಕಳ್ಳರು 4.80 ಲಕ್ಷ ರೂ. ಸಹಿತ ಆಭರಣಗಳನ್ನು ಕದ್ದೊಯ್ದಿದ್ದಾರೆ. ಅಜರುದ್ದೀನ್ ಎಂಬುವರ ಮನೆಯ ಬಾಗಿಲು ಮುರಿದು ಕಪಾಟಿನಲ್ಲಿದ್ದ 2.80 ಲಕ್ಷ ರೂ. ನಗದು ಕದ್ದಿದ್ದಾರೆ. ಈ ಮನೆ ಮಂದಿ ಸಂಬಂಧಿಕರ ಮನೆಗೆ ಕಾರ್ಯಕ್ರಮದ ನಿಮಿತ್ತ ಹೋಗಿದ್ದರು.

ಅಜರುದ್ದೀನ್ ಒಡೆತನದ ಬಾಡಿಗೆ ಮನೆಯಲ್ಲಿ ವಾಸ್ತವ್ಯವಿದ್ದ ನವಾಜ್ ಎಂಬುವರ ಮನೆಗೆ ನುಗ್ಗಿದ ಕಳ್ಳರು 2 ಲಕ್ಷ ರೂ ನಗದು ಹಣ, ಸುಮಾರು ಅರ್ಧ ಪವನ್ ಚಿನ್ನಾಭರಣಕದ್ದಿದ್ದಾರೆ. ಪುತ್ತೂರು ತಾಲೂಕು ಪಂಚಾಯತ್ ಸಿಬ್ಬಂದಿ ಮಹಮ್ಮದ್ ಸಿರಾಜ್ ಎಂಬುವರ ಮನೆ ಕೋಣೆಗಳಲ್ಲಿದ್ದ ಕಪಾಟುಗಳನ್ನು ಚೆಲ್ಲಾಪಿಲ್ಲಿಗೊಳಿಸಿ ಬೆಳ್ಳಿಗೆಜ್ಜೆ ಸಹಿತ ಮೂರು ಸಾವಿರ ನಗದು ಹಣ ಕದ್ದಿದ್ದಾರೆ.

ಸ್ಥಳೀಯ ಗ್ರಾಮ ಪಂಚಾಯಿತಿ ಸದಸ್ಯೆ ರತ್ನಾವತಿಯವರ ಹಳೆಯ ಮನೆಯಿಂದ ಚಿನ್ನಾಭರಣಕ್ಕಾಗಿ ಹುಡುಕಾಟ ನಡೆಸಿರುವುದು ಕಂಡು ಬಂದಿದೆ. ರಮಜಾನ್ ಹಬ್ಬದ ಪ್ರಯುಕ್ತ ಮನೆ ಮಂದಿ ಸಂಬಂಧಿಕರ ಮನೆಗೆ ತೆರಳಿರುವುದು ತಿಳಿದು ಕಳ್ಳತನ ಎಸಗಿದ್ದಾರೆ.

ಕಸ್ಟರ್ಡ್ ತಿಂದರು: ಮಹಮ್ಮದ್ ಸಿರಾಜ್ ಮನೆಯ ಫ್ರಿಡ್ಜ್ ನಲ್ಲಿರಿಸಿದ್ದ ಕಸ್ಟರ್ಡ್ ಮತ್ತಿತರ ತಿಂಡಿಗಳನ್ನು ತಿಂದು ಹೋಗಿದ್ದು, ಸಾವಕಾಶವಾಗಿ ಹಸಿವು ನೀಗಿಸಿಕೊಂಡು ಕಳವು ನಡೆಸಿದಂತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net