ಕೊಲ್ಲಂ: ವಿತರಕರಿಂದ ಎಂಡಿಎಂಎ ಡ್ರಗ್ಸ್ ಖರೀದಿಸಿ ಮನೆಗೆ ವಾಪಸ್ಸಾದ ವೇಳೆ ಮಲಯಾಳಂನ ಖ್ಯಾತ ಸೀರಿಯಲ್ ನಟಿ ( Serial actress ) ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾಳೆ.
ನಟಿಯ ಹೆಸರು ಪಾರ್ವತಿ ಅಲಿಯಾಸ್ ಶಮನಾಥ್. ಕೊಲ್ಲಂನ ಕಿರಿಂಕರ ನಹೂಂಪಾರದ ಶ್ರೀನಂದನಂ ಎಂಬಲ್ಲಿ ಪಾರ್ವತಿಯನ್ನು ಬಂಧಿಸಲಾಗಿದೆ. ಈಕೆ ತನ್ನ ಸ್ವಂತ ಬಳಕೆಗೆಂದು ಕಟಕಲ್ ಮೂಲದ ನವಾಜ್ ಎಂಬಾತನಿಂದ ಮಾದಕ ದ್ರವ್ಯ ಖರೀದಿಸಿ ಮನೆಗೆ ವಾಪಸ್ಸಾಗಿದ್ದಳು.
ನಟಿ ಡ್ರಗ್ಸ್ ಸೇವಿಸುತ್ತಿರುವ ಬಗ್ಗೆ ಪರವೂರು ಪೊಲೀಸರಿಗೆ ಮಾಹಿತಿ ಸಿಕ್ಕಿತ್ತು. ಇದನ್ನು ಆಧರಿಸಿ ಅ.18 ರಂದು ರಾತ್ರಿ ಎಂಟು ಗಂಟೆಗೆ ನಟಿಯ ಮನೆಯಲ್ಲಿ ಪೊಲೀಸರು ಶೋಧ ನಡೆಸಿದ್ದಾರೆ. ಆಗ ಡ್ರಗ್ಸ್ ಪತ್ತೆಯಾಗಿದೆ. ಸಮೀಪದ ನಿವಾಸಿಗಳ ಸಮ್ಮುಖದಲ್ಲೇ ಪೊಲೀಸರು ತಪಾಸಣೆ ನಡೆಸಿದರು. ಪೊಲೀಸರು ಆಗಮಿಸಿದಾಗ ಪಾರ್ವತಿ, ಆಕೆಯ ಪತಿ ಮತ್ತು ಮಕ್ಕಳು ಮನೆಯಲ್ಲಿದ್ದರು. ಟೇಬಲ್‌ನೊಳಗೆ ಆರು ಲಕೋಟೆಯಲ್ಲಿ 1.94 ಗ್ರಾಂ ಎಂಡಿಎಂಎ ಸಂಗ್ರಹಿಸಿರುವುದು ಪೊಲೀಸರಿಗೆ ಪತ್ತೆಯಾಗಿದೆ.
ನಟಿ ಪಾರ್ವತಿ ಹೇಳಿಕೆಯ ಆಧಾರದ ಮೇಲೆ ಪೊಲೀಸರು ಆಕೆಗೆ ಡ್ರಗ್ಸ್ ನೀಡಿದ ನವಾಜ್ ವಿರುದ್ಧವೂ ಪ್ರಕರಣ ದಾಖಲಿಸಿಕೊಂಡಿದ್ದಾರೆ. ತಾನು ಸುಮಾರು ಮೂರು ತಿಂಗಳಿನಿಂದ ಡ್ರಗ್ಸ್ ಸೇವನೆ ಮಾಡುತ್ತಿದ್ದೆ ಎಂದು ಪೊಲೀಸರ ವಿಚಾರಣೆ ವೇಳೆ ಪಾರ್ವತಿ ತಪ್ಪೊಪ್ಪಿಕೊಂಡಿದ್ದಾಳೆ. (ಏಜೆನ್ಸೀಸ್)
ಎರಡು ವರ್ಷಗಳ ಪ್ರೀತಿ: ಕೊನೆಗೂ ಪಾಲಕರನ್ನು ಒಪ್ಪಿಸಿ ತೃತೀಯಲಿಂಗಿಯನ್ನು ಮದ್ವೆಯಾದ ಯುವಕ! Love Marriage