More

    ಹೊಸ ಹಣಕಾಸು ವರ್ಷದ ಮೊದಲ ದಿನವೇ ಕುಸಿಯಿತು ಷೇರುಪೇಟೆ- ಸೆನ್ಸೆಕ್ಸ್ 700 ಅಂಶ ಕುಸಿದರೆ, ನಿಫ್ಟಿ 8.400ಕ್ಕಿಂತ ಕೆಳಕ್ಕೆ

    ಮುಂಬೈ: ಕರೊನಾ ಕರಿಛಾಯೆ ಷೇರುಪೇಟೆಯನ್ನೂ ಆವರಿಸಿರುವ ಕಾರಣ ಭಾರತೀಯ ಷೇರುಪೇಟೆಯ ಬಾಂಬೆ ಸ್ಟಾಕ್ ಎಕ್ಸ್​ಚೇಂಜ್​ (ಬಿಎಸ್​ಇ) ಸೂಚ್ಯಂಕ ಸೆನ್ಸೆಕ್ಸ್​ ಮತ್ತು ನ್ಯಾಷನಲ್ ಸ್ಟಾಕ್ ಎಕ್ಸ್​ಚೇಂಜ್​(ಎನ್​ಎಸ್​ಇ) ಸೂಚ್ಯಂಕ ನಿಫ್ಟಿ ಭಾರಿ ಕುಸಿತ ಮತ್ತು ಅಲ್ಪ ಏರಿಕೆ ದಾಖಲಿಸುತ್ತಲೇ ಇದೆ. ಬುಧವಾರದ ವಹಿವಾಟಿನಲ್ಲಿ ಸೆನ್ಸೆಕ್ಸ್ 700ಕ್ಕೂ ಹೆಚ್ಚು ಅಂಶ ಕುಸಿದರೆ, ನಿಫ್ಟಿ 8,400ರ ಕೆಳಕ್ಕೆ ಕುಸಿದಿದೆ. ರಿಲಯನ್ಸ್ ಇಂಡಸ್ಟ್ರೀಸ್​, ಕೊಟಾಕ್ ಬ್ಯಾಂಕ್​, ಎಚ್​ಡಿಎಫ್​ಸಿ ಬ್ಯಾಂಕ್​, ಇನ್​ಫೋಸಿಸ್​ ಷೇರುಗಳು ನಷ್ಟ ಅನುಭವಿಸಿದ್ದೇ ಇದಕ್ಕೆ ಕಾರಣ.

    ಹೊಸ ಹಣಕಾಸು ವರ್ಷದ ಮೊದಲ ದಿನವೇ ನೆಗೆಟಿವ್​ ಬೆಳವಣಿಗೆ ಕಾಣಿಸಿದ್ದು, 30 ಷೇರುಗಳ ಸೆನ್ಸೆಕ್ಸ್​ 714.74 ಅಂಶ (2.43%) ಕುಸಿದು 28,753.75ರಲ್ಲಿ ಬುಧವಾರ ಬೆಳಗ್ಗೆ ವಹಿವಾಟು ಮುಂದುವರಿಸಿದೆ. ಇದೇ ವೇಳೆ, ನಿಫ್ಟಿ 199 ಅಂಶ (2.31%) ಕುಸಿತ ಕಂಡು 8, 398.75ರಲ್ಲಿ ವಹಿವಾಟು ನಡೆಸಿದೆ.

    ಸೆನ್ಸೆಕ್ಸ್ ಪಟ್ಟಿಯಲ್ಲಿ ಕೊಟಾಕ್​ ಬ್ಯಾಂಕ್ ಷೇರುಗಳು ಗರಿಷ್ಠ ಶೇಕಡ 8 ನಷ್ಟ ಅನುಭವಿಸಿದರೆ, ಎಸ್​ಬಿಐ, ಇನ್​ಫೋಸಿಸ್​, ಎಚ್​ಡಿಎಫ್​ಸಿ ಬ್ಯಾಂಕ್​, ಟೆಕ್ ಮಹೀಂದ್ರಾ, ಅಲ್ಟ್ರಾ ಟೆಕ್ ಸಿಮೆಂಟ್ ಕಂಪನಿ ಷೇರುಗಳು ಕೂಡ ನಷ್ಟ ಅನುಭವಿಸಿವೆ. ಇನ್ನೊಂದೆಡೆ, ಇಂಡಸ್​ ಇಂಡ್ ಬ್ಯಾಂಕ್​, ಪವರ್​ಗ್ರಿಡ್​ ಷೇರುಗಳು ಲಾಭಗಳಿಸಿವೆ.

    ಈ ಹಿಂದಿನ ಅಂದರೆ ಮಂಗಳವಾರದ ವಹಿವಾಟಿನಲ್ಲಿ ಅಂದರೆ 2019-20ನೇ ಸಾಲಿನ ಹಣಕಾಸು ವರ್ಷದ ಕೊನೆಯ ದಿನ ಸೆನ್ಸೆಕ್ಸ್​ 1,028.17 ಅಂಶ(3.62%) ಏರಿಕೆಯೊಂದಿಗೆ 29,468.49ರಲ್ಲೂ, ನಿಫ್ಟಿ 316.65 ಅಂಶ (3.82%) ಏರಿಕೆಯೊಂದಿಗೆ 8,597.75ರಲ್ಲಿ ದಿನದ ವಹಿವಾಟು ಮುಗಿಸಿದ್ದವು. ಆದಾಗ್ಯೂ, ಕಳೆದ ಹಣಕಾಸು ವರ್ಷದಲ್ಲಿ ಸೆನ್ಸೆಕ್ಸ್ ಒಟ್ಟು 9,204.42 ಅಂಶ (23.80%) ಹಾಗೂ ನಿಫ್ಟಿ 3,026.15(26.03%) ಅಂಶ ಕುಸಿತ ಕಂಡು ನಷ್ಟ ಅನುಭವಿಸಿವೆ. (ಏಜೆನ್ಸೀಸ್)

    3 ತಿಂಗಳು ಮಾಸಿಕ ಕಂತಿನ ವಿನಾಯ್ತಿ ಪಡೆಯುವ ಮುನ್ನ ಸಾವಿರ ಬಾರಿ ಯೋಚಿಸಿ!?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts