ತಲ್ಲೂರು ಇಗರ್ಜಿಯಲ್ಲಿ ಹಿರಿಯರ ದಿನ

igarji
ತಲ್ಲೂರು ಸಂತ ಫ್ರಾನ್ಸಿಸ್ ಆಸ್ಸಿಸಿ ಇಗರ್ಜಿಯಲ್ಲಿ ಹಿರಿಯರ ದಿನವನ್ನು ಆಚರಿಸಲಾಯಿತು
Published on

ಗಂಗೊಳ್ಳಿ: ತಲ್ಲೂರು ಸಂತ ಫ್ರಾನ್ಸಿಸ್ ಆಸ್ಸಿಸಿ ಇಗರ್ಜಿಯಲ್ಲಿ ಕುಟುಂಬ ಆಯೋಗದ ಸಹಕಾರದಲ್ಲಿ ಕುಟುಂಬ ಆಯೋಗ ಸಂಚಾಲಕ ರಾಜೇಶ್ ಮೆಂಡೋನ್ಸಾ ನೇತೃತ್ವದಲ್ಲಿ ಹಿರಿಯರ ದಿನವನ್ನು ಶನಿವಾರ ಆಚರಿಸಲಾಯಿತು.

ಪ್ರಧಾನ ಗುರುಫ್ರಾನ್ಸಿಸ್ ಕಾರ್ನೆಲಿಯೋ ಬಲಿಪೂಜೆ ನೆರವೇರಿಸಿದರು.ನಿವೃತ್ತ ಪ್ರಾಧ್ಯಾಪಕಿ ಹಿಲ್ಡ ಡಿಸಿಲ್ವ ಮಾತನಾಡಿ ವೃದ್ಧಾಪ್ಯದಲ್ಲಿ ಹಿರಿಯರು, ಮಕ್ಕಳು ಮೊಮ್ಮಕ್ಕಳ ಜತೆ ಹೇಗೆ ಸುಖಕರ ಜೀವನ ನಡೆಸಬಹುದು ಎಂಬುದರ ಬಗ್ಗೆ ಮಾಹಿತಿ ನೀಡಿದರು. 60, 75 ವರ್ಷ ಪೂರೈಸಿದ ಹಿರಿಯರನ್ನು ಹಾಗೂ ಮದುವೆಯಾಗಿ 50 ವರ್ಷ ಪೂರೈಸಿದ ಹಿರಿಯ ದಂಪತಿಗೆ ಇಗರ್ಜಿ ಧರ್ಮಗುರುಎಡ್ವಿನ್ ಡಿಸೋಜ ಸನ್ಮಾನಿಸಿದರು.

ಸುಮಾರು 106 ಮಂದಿ ಹಿರಿಯರು ಪಾಲ್ಗೊಂಡಿದ್ದರು. ಇಗರ್ಜಿಯ ಪಾಲನಾ ಮಂಡಳಿ ಉಪಾಧ್ಯಕ್ಷರು, ಕಾರ್ಯದರ್ಶಿ ಹಾಗೂ 20 ಆಯೋಗದ ಸಂಚಾಲಕರು ಉಪಸ್ಥಿತರಿದ್ದರು. ಸದಸ್ಯ ಅನಿಲ್ ಡಿಸಿಲ್ವ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net