

ಕೋಟ: ಮಹಿಳಾ ವೇದಿಕೆ-ಕೂಟ ಮಹಜಗತ್ತು ಸಾಲಿಗ್ರಾಮ, ಸಾಲಿಗ್ರಾಮ ಅಂಗ ಸಂಸ್ಥೆ ಆಶ್ರಯದಲ್ಲಿ ಆಷಾಢ ವಿಶೇಷ ಶೀರ್ಷಿಕೆಯಲ್ಲಿ ಹಾಸ್ಯದೊಂದಿಗೆ ಜೀವನ ಮೌಲ್ಯ ಎನ್ನುವ ಕಾರ್ಯಕ್ರಮ ಶ್ರೀಗುರು ನರಸಿಂಹ ದೇವಸ್ಥಾನ ಜ್ಞಾನ ಮಂದಿರದಲ್ಲಿ ಇತ್ತೀಚೆಗೆ ನಡೆಯಿತು.
ಉಡುಪಿಯ ಹಾಸ್ಯ ಭಾಷಣಗಾರ್ತಿ ಸಂಧ್ಯಾ ಶೆಣೈ ಮಾನವನ ನಿತ್ಯ ಜೀವನದ ನಡೆ ನುಡಿ, ವ್ಯಕ್ತಿತ್ವದ ಸುಸಂಸ್ಕೃತ ಪರಿಕಲ್ಪನೆ ಮತ್ತು ಇಂದಿನ ಆಡಂಬರ ಸೋಗಿನ ಜೀವನ ಶೈಲಿಗಳ ಸೂಕ್ಷ್ಮತೆಗಳನ್ನ ಹಾಸ್ಯ ನಗುವಿನ ಮಾತಿನಿಂದ ಪ್ರಸ್ತುತಪಡಿಸಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಮಾತನಾಡಿದರು. ಮಹಿಳಾ ವೇದಿಕೆ ಅಧ್ಯಕ್ಷೆ ಯಶೋದಾ ಸಿ.ಹೊಳ್ಳ ಅಧ್ಯಕ್ಷತೆ ವಹಿಸಿದ್ದರು. ಗೆಳೆಯರ ಬಳಗದ ತಾರನಾಥ ಹೊಳ್ಳ, ಕೂಟ ಮಹಾಜಗತ್ತಿನ ಪ್ರಮುಖರಾದ ಪಿ.ಸಿ.ಹೊಳ್ಳ, ನರಸಿಂಹ ಅಧಿಕಾರಿ, ಶ್ರೀನಿವಾಸ ಉಪಾಧ್ಯ, ಸುಧಾಕರ ನಾವಡ, ರೋಟರಿ ಮತ್ತು ಇನ್ನರ್ವಿಲ್ ಸದಸ್ಯರು, ಮಹಿಳಾ ವೇದಿಕೆ ಸದಸ್ಯರು ಉಪಸ್ಥಿತರಿದ್ದರು. ಮಹಿಳಾ ವೇದಿಕೆ ಉಪಾಧ್ಯಕ್ಷೆ ರೇವತಿ ಐತಾಳ್ ಸ್ವಾಗತಿಸಿ, ವಿಜಯಲಕ್ಷ್ಮಿತುಂಗ ಮತ್ತು ಲತಾ ಹೊಳ್ಳ ಪ್ರಾರ್ಥಿಸಿದರು. ಪೂರ್ಣಿಮಾ ಅಧಿಕಾರಿ ಕಾರ್ಯಕ್ರಮ ನಿರೂಪಿಸಿದರು.