ಆಟಗಾರರ ಮಧ್ಯೆ ಬಿರುಕು, ಡ್ರೆಸ್ಸಿಂಗ್​ ರೂಮ್​ ಮಾತುಗಳು ಲೀಕ್​! ಟೀಮ್ ಇಂಡಿಯಾ ಬಗ್ಗೆ ಹಿರಿಯ ಕ್ರಿಕೆಟಿಗ ಕಿಡಿ | Senior Players

ವಿಜಯವಾಣಿ (11)
Published on

Senior Players: ಇತ್ತೀಚೆಗಷ್ಟೇ ಮುಕ್ತಾಯಗೊಂಡ ಬಾರ್ಡರ್​ ಗವಾಸ್ಕರ್ ಟ್ರೋಫಿಯ ನಾಲ್ಕನೇ ದಿನದ ಬಾಕ್ಸಿಂಗ್ ಡೇ ಟೆಸ್ಟ್ ಹಣಾಹಣಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ ಹೀನಾಯ ಸೋಲು ಅನುಭವಿಸಿತು. ಕ್ಯಾಪ್ಟನ್ ರೋಹಿತ್ ಶರ್ಮ, ವಿರಾಟ್​ ಕೊಹ್ಲಿರಂತಹ ಸ್ಟಾರ್​ ಆಟಗಾರರೇ ಅತ್ಯಂತ ಕಳಪೆ ಪ್ರದರ್ಶನ ತೋರಿರುವುದು ಹಾಗೂ ತಂಡ ಗೆಲುವು ಸಾಧಿಸುವಲ್ಲಿ ಎಡವಿದ್ದನ್ನು ಹೆಡ್ ಕೋಚ್ ಗೌತಮ್ ಗಂಭೀರ್ ತೀವ್ರವಾಗಿ ಖಂಡಿಸಿದ್ದಾರೆ. ಈ ಕುರಿತಂತೆ ಡ್ರೆಸ್ಸಿಂಗ್ ರೂಮ್​ನಲ್ಲಿ ಆಟಗಾರರ ವಿರುದ್ಧ ಗರಂ ಆದ ಗಂಭೀರ್, ಕೆಲವು ವಿಷಯಗಳನ್ನು ತಂಡಕ್ಕೆ ಒತ್ತಿ ಹೇಳಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಟೀಮ್ ಇಂಡಿಯಾದ ಮಾಜಿ ಹಿರಿಯ ಆಟಗಾರ ಆಕಾಶ್ ಚೋಪ್ರಾ ಶಾಕಿಂಗ್ ವಿಚಾರವೊಂದನ್ನು ಹಂಚಿಕೊಂಡಿದ್ದಾರೆ.

ವಿನಃ ಇನ್ನಾರೂ ಅಲ್ಲ

ಇಲ್ಲಿ ಕೋಚ್ ಆದ ಗಂಭೀರ್ ತಮ್ಮ ಆಟಗಾರರಿಗೆ ಹೇಳಿದ್ದು, ಇಲ್ಲಿಯವರೆಗೂ ನೋಡಿದ್ದು ಸಾಕು. ನನ್ನ ಮುಂದಿನ ಸೂಚನೆಗಳನ್ನು ಸರಿಯಾಗಿ ಪಾಲಿಸಿ. ತಂಡದ ಪರ ಉತ್ತಮ ಪ್ರದರ್ಶನ ನೀಡದವರನ್ನು ಕೈಬಿಡಲಾಗುವುದು ಎಂಬುದನ್ನು ಖಾರವಾಗಿ ಹೇಳಿದರು. ಸದ್ಯ ಡ್ರೆಸ್ಸಿಂಗ್ ರೂಮ್​ನಲ್ಲಿ ನಡೆದ ಆಟಗಾರರ ಹಾಗೂ ಕೋಚ್​ ನಡುವಿನ ಸಂಭಾಷಣೆ ಹೊರಗಡೆ ಬರಲು ಹೇಗೆ ಸಾಧ್ಯ? ಇದನ್ನು ಅಲ್ಲಿನ ಆಟಗಾರರೇ ಲೀಕ್ ಮಾಡಿರಬೇಕೆ ವಿನಃ ಇನ್ನಾರೂ ಅಲ್ಲ.  ಇದಕ್ಕೆ ತಂಡದ ಹಿರಿಯ ಆಟಗಾರರೇ ಕಾರಣ ಎಂದು ಆಕಾಶ್​ ಚೋಪ್ರಾ ದೂರಿದ್ದಾರೆ.

ಸಂಭಾಷಣೆಗಳು ಸೋರಿಕೆ

ತಂಡದಲ್ಲಿ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ರವೀಂದ್ರ ಜಡೇಜಾ ಮತ್ತು ಜಸ್ಪ್ರೀತ್ ಬುಮ್ರಾ ಪ್ರಸ್ತುತ ಟೆಸ್ಟ್ ತಂಡದಲ್ಲಿರುವ ನಾಲ್ವರು ಹಿರಿಯ ಆಟಗಾರರಾಗಿದ್ದು, ಮೂವರು ಆಸ್ಟ್ರೇಲಿಯಾ ವಿರುದ್ಧ ಉತ್ತಮ ಪ್ರದರ್ಶನ ನೀಡಲು ಪರದಾಡುತ್ತಿದ್ದಾರೆ. "ಡ್ರೆಸ್ಸಿಂಗ್ ರೂಮ್ ಒಂದು ಪವಿತ್ರ ಸ್ಥಳ. ಇನ್ನೊಂದು ರೀತಿ ಹೇಳುವುದಾದರೆ ಇದೊಂದು ಕುಟುಂಬವಿದ್ದಂತೆ. ಇಲ್ಲಿ ನಡೆಯುವ ಮಾತುಕತೆಗಳು, ಸಂಭಾಷಣೆಗಳು ಹೊರಗಿನವರಿಗೆ ಎಂದಿಗೂ ಬಹಿರಂಗ ಆಗುವುದಿಲ್ಲ. ಆದರೂ ಸಹ ಸಂಭಾಷಣೆಗಳು ಸೋರಿಕೆ ಆಗುತ್ತಿವೆ ಎಂದಾದರೆ ಅಲ್ಲಿ ಆಟಗಾರರ ಮಧ್ಯೆ ಬಿರುಕು ಮೂಡಿದೆ ಎಂಬ ಅರ್ಥ. ಅಭದ್ರತೆ ಮತ್ತು ಹಿರಿಯರ ಭಯದಿಂದ ಜೂನಿಯರ್ಸ್​ ಒಳಗಿನ ಮಾತನ್ನು ಹೊರಬಿಡುವುದಿಲ್ಲ. ಆದ್ರೆ, ಹಿರಿಯ ಆಟಗಾರರು ಸದಾ ಇಂತಹ ಮಾಹಿತಿಗಳನ್ನು ಲೀಕ್ ಮಾಡುತ್ತಾರೆ" ಎಂದರು.

ಯಾವುದು ಸರಿಯಿಲ್ಲ

“ಅಸಲಿಗೆ ವರದಿಗಳು ನಿಜವಾಗಿದ್ದರೆ, ಅದು ಒಳ್ಳೆಯದಲ್ಲ. ಹಿರಿಯ ಆಟಗಾರರೊಬ್ಬರು ತಂಡದ ಹಂಗಾಮಿ ನಾಯಕರಾಗಲು ಮತ್ತು ಪರಿವರ್ತನೆಯ ಬದಲಾವಣೆ ತರಲು ಸಿದ್ಧರಿದ್ದಾರೆ ಎಂಬ ಸಂಗತಿಯನ್ನು ವರದಿಗಳು ಉಲ್ಲೇಖಿಸುತ್ತಿವೆ. ಟೀಮ್ ಇಂಡಿಯಾದಲ್ಲಿ ಏನಾಗುತ್ತಿದೆ? ಹೊಸ ವರ್ಷ ಈಗ ತಾನೇ ಆರಂಭವಾಗಿದೆ. ನಾಲ್ಕನೇ ಟೆಸ್ಟ್‌ನಲ್ಲಿನ ಸೋಲಿನ ನಂತರ ತಂಡದಲ್ಲಿ ಯಾವುದು ಸರಿಯಿಲ್ಲ. ಐದನೇ ಟೆಸ್ಟ್​ನಲ್ಲಿ ತಂಡ ಗೆದ್ದರೆ ಬಾರ್ಡರ್ ಗವಾಸ್ಕರ್ ಟ್ರೋಫಿಯ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್‌ ಪ್ರವೇಶಕ್ಕೆ ಅರ್ಹತೆ ಪಡೆಯಬಹುದು" ಎಂದು ಆಕಾಶ್​ ಅಭಿಪ್ರಾಯಿಸಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net