ಜನರಿಂದ ಪ್ರತ್ಯೇಕವಾಗಿ ಇರುವುದೇ ಕರೊನಾ ವೈರಸ್​ಗೆ ಇರುವ ಏಕೈಕ ಮದ್ದು ಎಂದ ಸ್ವಘೋಷಿತ ದೇವಮಾನವ

Nityananda 1 dec 19
Published on

ಈಕ್ವೆಡಾರ್​: ಜನರಿಂದ ಪ್ರತ್ಯೇಕವಾಗಿ ಇರುವುದೇ ಕರೊನಾ ವೈರಸ್​ ಸೋಂಕಿಗೆ ಇರುವ ಏಕೈಕ ಮದ್ದು ಎಂದು ಸ್ವಘೋಷಿತ ದೇವ ಮಾನವ ನಿತ್ಯಾನಂದ ಹೇಳಿದ್ದಾನೆ.

ವಿಶ್ವದಲ್ಲಿ ಮಾರಕ ಕರೊನಾ ವೈರಸ್​ ಸೋಂಕಿಗೆ ಸಾವಿರಾರು ಮಂದಿ ಮೃತಪಟ್ಟಿದ್ದಾರೆ. ಇದಕ್ಕೆ ಮದ್ದು ಇಲ್ಲದ ಹಿನ್ನೆಲೆಯಲ್ಲಿ ಪ್ರತ್ಯೇಕವಾಗಿರುವುದು ಸೂಕ್ತ. ಈ ವಿಧಾನವನ್ನು ನಾನು ಈಗಾಗಲೇ ಅನುಸರಿಸುತ್ತಿದ್ದೇನೆ ಎಂದು ನಿತ್ಯಾನಂದ ಹೇಳಿಕೊಂಡಿದ್ದಾನೆ.

ನಿತ್ಯಾನಂದ ಈಕ್ವೆಡಾರ್​ನಲ್ಲಿ ಒಂದು ದ್ವೀಪ ಖರೀದಿಸಿ, ಅದಕ್ಕೆ ಕೈಲಾಸ ಎಂದು ಹೆಸರು ನಾಮಕರಣ ಮಾಡಿಕೊಂಡು ಅಲ್ಲಿ ವಾಸವಾಗಿದ್ದಾನೆ.

ನಾನು ದ್ವೀಪ ಖರೀದಿಸಿ ಪ್ರತ್ಯೇಕವಾಗಿ ವಾಸ ಮಾಡಲು ಆರಂಭಿಸಿದಾಗ ಭಾರತೀಯರು ಅಣಕ ಮಾಡಿದ್ದರು. ಈಗ ಇಡೀ ಜಗತ್ತು ಸಾಮಾಜಿಕವಾಗಿ ಅಂತರ ಕಾಯ್ದುಕೊಳ್ಳಬೇಕು ಎಂದು ಹೇಳುತ್ತಿದೆ. ಶಿವ ನನ್ನನ್ನು ಕಾಪಾಡಿದ್ದಾನೆ. ನಾನು ಪ್ರತ್ಯೇಕವಾಗಿರುವುದರಿಂದ ಸೋಂಕು ಹರಡಿಲ್ಲ ಎಂದು ನಿತ್ಯಾನಂದ ಹೇಳಿಕೊಂಡಿದ್ದಾನೆ.

ಸ್ವಘೋಷಿತ ದೇವಮಾನವ ನಿತ್ಯಾನಂದನ ವಿರುದ್ಧ ಅನಾಥ ಮಕ್ಕಳನ್ನು ಅಪಹರಣ ಮಾಡಿ ಅಕ್ರಮವಾಗಿ ಬಂಧನದಲ್ಲಿ ಇಟ್ಟಿದ್ದು, ಮಹಿಳೆ ಮೇಲೆ ಅತ್ಯಾಚಾರ ಎಸಗಿದ್ದು ಸೇರಿದಂತೆ ಹಲವು ಪ್ರಕರಣಗಳು ದಾಖಲಾಗಿ. ಕೋರ್ಟ್​ ಬಂಧನದ ವಾರೆಂಟ್​ ಹೊರಡಿಸಿದೆ. ಹೀಗಾಗಿ ಈತ ತಲೆ ಮರೆಸಿಕೊಂಡು ವಿದೇಶಕ್ಕೆ ಪರಾರಿಯಾಗಿದ್ದಾನೆ. ಈತನ ವಿರುದ್ಧ ಇಂಟರ್​ಪೋಲ್​ ಬ್ಲೂಕಾರ್ನರ್​ ನೋಟಿಸ್​ ಜಾರಿ ಮಾಡಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net