

ಕೋಟ: ಶಿರಸಿಯ ಮನುವಿಕಾಸ ಸಂಸ್ಥೆ ಶಿರಸಿ ಮತ್ತು ಬೆಂಗಳೂರಿನ ನಬಾರ್ಡ್ ಹಾಗೂ ಉಪ್ಪುಂದ ಮತ್ಸೃಸಿರಿ ಮಹಿಳಾ ಮೀನು ಉತ್ಪಾದಕರ ಮತ್ತು ಮತ್ಸ್ಯೋದ್ಯಮ ಸಂದ ವತಿಯಿಂದ ಉಪ್ಪುಂದ ನಾಡದೋಣಿ ಭವನದಲ್ಲಿ ಸ್ವಉದ್ಯೋಗ ಮಾಹಿತಿ ಕಾರ್ಯಾಗಾರ ಹಾಗೂ ಆಡಳಿತ ಮಂಡಳಿ ಸದಸ್ಯರ ಸಭೆ ಇತ್ತೀಚಿಗೆ ನಡೆಯಿತು.
ಮನು ವಿಕಾಸ ಸಂಸ್ಥೆ ಆಡಳಿತ ನಿರ್ದೇಶಕ ಗಣಪತಿ ಭಟ್ ಅಧ್ಯಕ್ಷತೆ ವಹಿಸಿದ್ದರು. ಮತ್ಸೃ ಸಂಜೀವಿನಿ ಮೀನುಗಾರರ ಉತ್ಪಾದಕ ಕಂಪನಿ ಅಧ್ಯಕ್ಷ ಎ.ಆನಂದ ಖಾರ್ವಿ, ಮತ್ಸೃಸಿರಿ ಮೀನು ಉತ್ಪಾದಕ ಕಂಪನಿ ಅಧ್ಯಕ್ಷೆ ನಾಗವೇಣಿ, ಮನುವಿಕಾಸ ಸಂಸ್ಥೆ ಸಿಬ್ಬಂದಿ ಗಣಪತಿ ಗಾಮದ್, ನವೀನ್, ವನೀತಾ ಉಪಸ್ಥಿತರಿದ್ದರು
ಉಡುಪಿ ಕಿನಾರ ಮೀನುಗಾರರ ಉತ್ಪಾದಕ ಕಂಪನಿ ನಿರ್ದೇಶಕ ಸುದಿನ ಮೀನು ಸಾಕಾಣಿಕೆ, ಪಚ್ಚಿಲೆ, ಕಲ್ಲ ಮುತ್ತು ಕೃಷಿ ಬಗ್ಗೆ ಮಾಹಿತಿ ನೀಡಿದರು. ರುಡ್ ಸೆಟ್ ಸಂಸ್ಥೆಯ ಸಂತೋಷ್ ಸ್ವಉದ್ಯೋಗ ತರಬೇತಿ ಬಗ್ಗೆ ಮಾಹಿತಿ ನೀಡಿದರು. ಮನುವಿಕಾಸ ಸಂಸ್ಥೆ ಸಿಬ್ಬಂದಿ ಗೀತಾ ಕಾರ್ಯಕ್ರಮ ನಿರೂಪಿಸಿದರು.