‘ನಡುವಣ ಲೋಕದ ನಡೆ’ ಪುಸ್ತಕ ಬಿಡುಗಡೆ

pdb-4
Published on

ಪಡುಬಿದ್ರಿ: ಜಾನಪದ ಆರಾಧನೆಗಳಲ್ಲಿ ಮರೆಯಾಗುತ್ತಿರುವ ಸಾಂಸ್ಕೃತಿಕ ಮೌಲ್ಯ ಹಾಗೂ ಸಂಪ್ರದಾಯ ಮತ್ತು ಪರಂಪರೆಗಳನ್ನು ಕಾಪಿಡಲು ಕ್ಷೇತ್ರಕಾರ್ಯ ಆಧಾರಿತ ಕೆಲಸಗಳು ಇನ್ನಷ್ಟು ನಡೆಯಬೇಕು ಎಂದು ವಿಮರ್ಶಕ ಬಿ.ಜನಾರ್ದನ ಭಟ್ ಹೇಳಿದರು.

ಕುಂಜೂರು ಶ್ರೀ ದುರ್ಗಾ ದೇವಸ್ಥಾನದಲ್ಲಿ ನಡೆದ, ಕೆ.ಎಲ್.ಕುಂಡಂತಾಯರ ‘ನಡುವಣ ಲೋಕದ ನಡೆ ದೈವಾರಾಧನೆ ನೆಲೆ ಕಲೆ’ ಪುಸ್ತಕದ ದ್ವಿತೀಯ ಆವೃತ್ತಿ ಬಿಡುಗಡೆ ಕಾರ್ಯಕ್ರಮದಲ್ಲಿ ವಾತನಾಡಿದರು.

ಉದ್ಯಮಿ ನೈವಾಡಿ ನಾರಾಯಣ ಕೆ.ಶೆಟ್ಟಿ ಪುಸ್ತಕ ಬಿಡುಗಡೆಗೊಳಿಸಿದರು. ರಾಷ್ಟ್ರಪ್ರಶಸ್ತಿ ಪುರಸ್ಕೃತ ಕಲಾ ಶಿಕ್ಷಕ ರಾಧಾಕೃಷ್ಣ ಉಪಾಧ್ಯಾಯ ಮೂಡುಬೆಳ್ಳೆ ಹಾಗೂ ಜನಾರ್ದನ ಭಟ್ ಅವರನ್ನು ಗೌರವಿಸಲಾಯಿತು.

ಎಲ್ಲೂರು ದೇವಳ ವಾಜಿ ಆಡಳಿತ ಮೊಕ್ತೇಸರರಾದ ಎಲ್ಲೂರು ಗುತ್ತು ಪ್ರಪುಲ್ಲ ಶೆಟ್ಟಿ, ಕುಂಜೂರು ದುರ್ಗಾ ದೇವಸ್ಥಾನ ಆಡಳಿತ ಮೊಕ್ತೇಸರ ದೇವರಾಜ ರಾವ್ ನಡಿಮನೆ, ಗ್ರಾಪಂ ಸದಸ್ಯ ಯಶವಂತ ಶೆಟ್ಟಿ, ದೇವಳ ಪ್ರಬಂಧಕ ರಾವೇಂದ್ರ ಶೆಟ್ಟಿ, ಹಿರಿಯ ಸಾಹಿತಿ ರಾಮದಾಸ ಕುಂಡಂತಾಯ, ನಿವೃತ್ತ ಬ್ಯಾಂಕ್ ಅಧಿಕಾರಿ ವಾಮನ ಕುಂಡಂತಾಯ, ಸತೀಶ ಕುಂಡಂತಾಯ, ಭಾರ್ಗವ ಕುಂಡಂತಾಯ, ಶ್ರೀಕಾಂತ ಕುಂಡಂತಾಯ ಉಪಸ್ಥಿತರಿದ್ದರು. ನಿವೃತ್ತ ಪ್ರಾಂಶುಪಾಲ ಸುದರ್ಶನ ವೈ.ಎಸ್. ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಸತೀಶ ಶೆಟ್ಟಿ ಗುಡ್ಡೆಚ್ಚಿ ನಿರೂಪಿಸಿ, ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net