ರಕ್ಷಕ ಶಿಕ್ಷಕ ಸಂಘದ ಪದಾಧಿಕಾರಿಗಳ ಆಯ್ಕೆ

Kdb_Pradeep-Bakila
Published on

ಕಡಬ: ಶ್ರೀ ರಾಮಕುಂಜೇಶ್ವರ ವಿದ್ಯಾಲಯದ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾಗಿ ಪ್ರದೀಪ್ ಬಾಕಿಲ, ಉಪಾಧ್ಯಕ್ಷರಾಗಿ ಕೆೆ.ಎ.ಸುಲೈಮಾನ್, ಚೈತ್ರಾ ಎನ್., ಜತೆಕಾರ್ಯದರ್ಶಿಗಳಾಗಿ ಯತೀಶ್ ಪುತ್ಯ, ಜಯಶ್ರೀ ಹಾಗೂ ಸದಸ್ಯರಾಗಿ ನೀರಜ್ ಕುಮಾರ್, ಸುರೇಶ್ ಪಿ.ಜೆ., ಸೋಮಶೇಖರ ಶೆಟ್ಟಿ, ನಿವ್ಯ ಪಿ.ಎನ್., ಅರ್ಚನಾ ಬಿ.ಜೆ., ಮಧುಲಿಕ ಎಸ್.ಎಂ.ಆಯ್ಕೆಯಾಗಿದ್ದಾರೆ.

ಕಾಲೇಜಿನಲ್ಲಿ ನಡೆದ ಸಭೆಯಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಿತು. ಶಾಲಾ ಕಾರ್ಯದರ್ಶಿ ಸೇಸಪ್ಪ ರೈ, ಸಂಚಾಲಕ ಶಿವಪ್ರಸಾದ್ ಆಚಾರ್ಯ, ಶಾಲಾ ಡಳಿತ ಮಂಡಳಿ ಸದಸ್ಯ ಎಂ.ಸತೀಶ್ ಭಟ್ ಉಪಸ್ಥಿತರಿದ್ದರು. ಪ್ರಾಂಶುಪಾಲ ಪ್ರವಿದ್ ಸ್ವಾಗತಿಸಿದರು. ಶಿಕ್ಷಕಿಯರಾದ ಚಂದ್ರಕಲಾ ವಂದಿಸಿದರು. ರಜನಿ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net