ಗಂಗೊಳ್ಳಿ: ಷಟ್ಲ್ ಬ್ಯಾಡ್ಮಿಂಟನ್‌ನಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ಗಂಗೊಳ್ಳಿಯ ಎಸ್.ವಿ. ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಪ್ರಾರ್ಥನಾ ಪೈ ಅವರನ್ನು ಗಂಗೊಳ್ಳಿಯ 6 ಎಎಂ ಬ್ಯಾಡ್ಮಿಂಟನ್ ಫ್ರೆಂಡ್ಸ್ ವತಿಯಿಂದ ಗೌರವಿಸಲಾಯಿತು.
ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿ ಪೂರ್ವ ಕಾಲೇಜಿನ ಗುಜ್ಜಾಡಿ ಗೋಪಾಲ ನಾಯಕ್ ರೋಟರಿ ಒಳಾಂಗಣದಲ್ಲಿ ಭಾನುವಾರ ನಡೆದ ಸನ್ಮಾನ ಕಾರ್ಯಕ್ರಮ ಮತ್ತು ಷಟ್ಲ್ ಬ್ಯಾಡ್ಮಿಂಟನ್ ಪಂದ್ಯಾಟದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಶಿಕ್ಷಕ ರಾಘವೇಂದ್ರ ಶೇರುಗಾರ್ ಅವರು ಪ್ರಾರ್ಥನಾ ಪೈ ಅವರನ್ನು ಸನ್ಮಾನಿಸಿ ಗೌರವಿಸಿದರು.
6 ಎಎಂ ಬ್ಯಾಡ್ಮಿಂಟನ್ ಫ್ರೆಂಡ್ಸ್‌ನ ಮನೋಜ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪತ್ರಕರ್ತ ಬಿ.ರಾಘವೇಂದ್ರ ಪೈ, ಎಸ್.ವಿ. ಆಂಗ್ಲ ಮಾಧ್ಯಮ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಸೂರಜ್ ಸಾರಂಗ್, ಎಸ್.ವಿ. ಪದವಿ ಪೂರ್ವ ಕಾಲೇಜಿನ ದೈಹಿಕ ಶಿಕ್ಷಣ ಉಪನ್ಯಾಸಕ ದೀಕ್ಷಿತ್ ಮೇಸ್ತ, ಸಂಘ ಸದಸ್ಯರಾದ ಲಿಪ್ಟನ್ ಒಲಿವೇರಾ, ರಾಮ ಪೂಜಾರಿ, ನಿಶಾಕಾಂತ್, ಚೇತನ್ ಆರ್ಕಾಟಿ, ಶಶಿಕಾಂತ್ ಪೂಜಾರಿ, ಕೌಶಿಕ್ ಪೂಜಾರಿ, ಶ್ರಾವ್ಯ, ದೀಪ್ತಿ ಮೊದಲಾದವರು ಉಪಸ್ಥಿತರಿದ್ದರು.