

ಕುಂದಾಪುರ: ಸಾರ್ವಜನಿಕ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಕುಂದಾಪುರ ತಾಲೂಕು, ಕಂಡ್ಲೂರು ಜೀಯಾ ಪಬ್ಲಿಕ್ ಸ್ಕೂಲ್ ಆಶ್ರಯದಲ್ಲಿ ಜರುಗಿದ ಕುಂದಾಪುರ ವಲಯ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಯಡಾಡಿ ಮತ್ಯಾಡಿಯ ವಿದ್ಯಾರಣ್ಯ ಆಂಗ್ಲ ಮಾಧ್ಯಮ ಶಾಲೆಯ ಮೂವರು ವಿದ್ಯಾರ್ಥಿಗಳು ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
17ರ ವಯೋಮಾನದೊಳಗಿನ ಬಾಲಕಿಯರ ಕರಾಟೆ ಸ್ಪರ್ಧೆಯ 56 ಕೆಜಿ ವಿಭಾಗದಲ್ಲಿ 10ನೇ ತರಗತಿಯ ಪ್ರತೀಕ್ಷಾ ಪಿ., 60 ಕೆಜಿ ವಿಭಾಗದಲ್ಲಿ 9ನೇ ತರಗತಿಯ ಶರ್ವಾಣಿ ಪ್ರಥಮ ಸ್ಥಾನ ಪಡೆದು ಜಿಲ್ಲಾಮಟ್ಟಕ್ಕೆ ಆಯ್ಕೆಯಾದರೆ, 17ರ ವಯೋಮಾನದೊಳಗಿನ ಹುಡುಗರ ವಿಭಾಗದ 58 ಕೆಜಿ ವಿಭಾಗದಲ್ಲಿ 10ನೇ ತರಗತಿಯ ಪ್ರೀತಂ ಕುಲಾಲ್ ಪ್ರಥಮ ಸ್ಥಾನದೊಂದಿಗೆ ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
17ರ ವಯೋಮಾನದ ಹುಡುಗಿಯರ ವಿಭಾಗದಲ್ಲಿ 9ನೇ ತರಗತಿಯ ಸ್ಫೂರ್ತಿ ಹೆಬ್ಬಾರ್ 40 ಕೆಜಿ ವಿಭಾಗದಲ್ಲಿ ದ್ವಿತೀಯ ಸ್ಥಾನ, ಪ್ರತೀಕ್ಷಾ ಮಡಿವಾಳ 10ನೇ ತರಗತಿ 48 ಕೆಜಿ ವಿಭಾಗದಲ್ಲಿ ದ್ವಿತೀಯ ಸ್ಥಾನ, 10ನೇ ತರಗತಿ ವಿಜಯ ಪೈ 44 ಕೆಜಿ ವಿಭಾಗದಲ್ಲಿ ತೃತೀಯ ಸ್ಥಾನ ಪಡೆದಿದ್ದಾರೆ. 17ರ ವಯೋಮಾನದೊಳಗಿನ ಹುಡುಗರ ವಿಭಾಗದಲ್ಲಿ ರವಿಕುಮಾರ್ 10ನೇ ತರಗತಿ 54 ಕೆಜಿ ವಿಭಾಗದಲ್ಲಿ ದ್ವಿತೀಯ ಸ್ಥಾನ, ಯಶವಂತ 10ನೇ ತರಗತಿ 62 ಕೆಜಿ ವಿಭಾಗದಲ್ಲಿ ತೃತೀಯ ಸ್ಥಾನ, 10ನೇ ತರಗತಿಯ ಬಿ.ಎ.ಶಾಹಿಲ್ 70 ಕೆಜಿ ವಿಭಾಗದಲ್ಲಿ ತೃತೀಯ ಸ್ಥಾನ ಪಡೆದಿದ್ದಾರೆ.
ಸಂಸ್ಥೆ ದೈಹಿಕ ಶಿಕ್ಷಣ ಶಿಕ್ಷಕರಾದ ಸತೀಶ್ ಕುಮಾರ್, ಸೂರ್ಯ ಮಾರ್ಗದರ್ಶನ ನೀಡಿದ್ದರು. ದೈಹಿಕ ಶಿಕ್ಷಣ ಶಿಕ್ಷಕಿ ಕಾವ್ಯ ಶೆಟ್ಟಿ ತಂಡದ ವ್ಯವಸ್ಥಾಪಕಿಯಾಗಿ ಕಾರ್ಯ ನಿರ್ವಹಿಸಿದ್ದರು. ಸುಜ್ಞಾನ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ಡಾ.ರಮೇಶ್ ಶೆಟ್ಟಿ, ಕಾರ್ಯದರ್ಶಿ ಪ್ರತಾಪ್ಚಂದ್ರ ಶೆಟ್ಟಿ, ಖಜಾಂಚಿ ಭರತ್ ಶೆಟ್ಟಿ, ಮುಖ್ಯಶಿಕ್ಷಕ ಪ್ರದೀಪ್ ಕೆ. ವಿಜೇತರನ್ನು ಅಭಿನಂದಿಸಿದರು.