

ನವದೆಹಲಿ: ವೀರೇಂದ್ರ ಸೆಹ್ವಾಗ್ ಕ್ರಿಕೆಟ್ ಮೈದಾನದಲ್ಲಿ ಸ್ಫೋಟಕ ಬ್ಯಾಟಿಂಗ್ಗೆ ಹೆಸರಾದವರು. ಅದೇ ಕ್ರಿಕೆಟ್ ಮೈದಾನದ ಹೊರಗೆ ಅವರದು ತಮಾಷೆಯ ಮೂಲಕ ಬದುಕನ್ನು ಆನಂದಿಸುವ ವ್ಯಕ್ತಿತ್ವ. ಸಾಮಾಜಿಕ ಜಾಲತಾಣಗಳಲ್ಲಿ ಎಲ್ಲರ ಕಾಲೆಳೆಯುತ್ತ ಬಂದಿರುವ ವೀರೇಂದ್ರ ಸೆಹ್ವಾಗ್ ಇದೀಗ ತಮ್ಮ ಶ್ವಾನ ಪ್ರೀತಿಯನ್ನೂ ಹಂಚಿಕೊಂಡಿದ್ದಾರೆ.
ಈ ಹಿಂದೆಯೂ ಹಲವು ಬಾರಿ ಶ್ವಾನ ಪ್ರೀತಿಯ ಬಗ್ಗೆ ಮಾತನಾಡಿರುವ ವೀರೇಂದ್ರ ಸೆಹ್ವಾಗ್, ತಮ್ಮ ನೆಚ್ಚಿನ 2 ನಾಯಿಗಳ ಜತೆಗಿನ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದಾರೆ. ಜತೆಗೆ, 'ನಾಯಿಗಳು ಮಾತನಾಡುತ್ತವೆ. ಆದರೆ ಯಾರಿಗೆ ಕೇಳಿಸಿಕೊಳ್ಳಲು ಗೊತ್ತಿರುತ್ತದೋ ಅವರಿಗೆ ಮಾತ್ರ ಅದು ಅರ್ಥವಾಗುತ್ತದೆ' ಎಂದು ಸೆಹ್ವಾಗ್ ಬರೆದುಕೊಂಡಿದ್ದಾರೆ.
ಭಾರತ ಪರ 104 ಟೆಸ್ಟ್, 251 ಏಕದಿನ ಮತ್ತು 19 ಟಿ20 ಪಂದ್ಯಗಳನ್ನು ಆಡಿರುವ ವೀರೇಂದ್ರ ಸೆಹ್ವಾಗ್, ಟೆಸ್ಟ್ ಕ್ರಿಕೆಟ್ನಲ್ಲಿ 2 ತ್ರಿಶತಕ ಸಿಡಿಸಿರುವ ವಿಶ್ವದ ಕೆಲವೇ ಬ್ಯಾಟ್ಸ್ಮನ್ಗಳಲ್ಲಿ ಒಬ್ಬರೆನಿಸಿದ್ದಾರೆ. ಕಳೆದ ವರ್ಷ ಅಂತಾರಾಷ್ಟ್ರೀಯ ಶ್ವಾನ ದಿನದಂದು (ಆಗಸ್ಟ್ 26) ಸೆಹ್ವಾಗ್, ನಾಯಿಮರಿಯೊಂದಕ್ಕೆ ಸ್ನಾನ ಮಾಡಿಸುವ ವಿಡಿಯೋದೊಂದಿಗೆ ಗಮನಸೆಳೆದಿದ್ದರು.