VIDEO: ಕೋಳಿಯ ಬೆನ್ನೇರಿದ ನಾಯಿ ಮರಿ; ಹೊರಟಿದ್ದೆಲ್ಲಿಗೆ?

Cute dog
Published on

ನವ ದೆಹಲಿ: ಕೋಳಿಯೊಂದು, ಸಣ್ಣ ನಾಯಿ ಮರಿಯನ್ನು ತನ್ನ ಬೆನ್ನೆ ಮೇಲೆ ಕುಳ್ಳಿರಿಸಿಕೊಂಡು ಸವಾರಿ ಹೊರಟಿದೆ. ಇದೀಗ ಈ ವಿಡಿಯೋ ಟ್ವಿಟರ್​ನಲ್ಲಿ ವೈರಲ್ ಆಗುತ್ತಿದೆ.


ಕೋಳಿ ತನ್ನ ಪಾಡಿಗೆ ಸುತ್ತಾಡುತ್ತಿತ್ತು. ಈ ವೇಳೆ ಜರ್ಮನ್ ಶೆಫರ್ಡ್ ತಳಿಯ ನಾಯಿ ಮರಿಯೊಂದು ಕೋಳಿಯ ಹತ್ತಿರ ಬಂದಿದೆ. ಈ ವೇಳೆ ಕೋಳಿ ನಾಯಿ ಮರಿಯನ್ನು ತನ್ನ ಬೆನ್ನ ಮೇಲೆ ಹತ್ತಿಸಿಕೊಂಡಿದೆ. ನಾಯಿ ಮರಿ ಯಾವುದೇ ಭಯವಿಲ್ಲದೆ ಕೋಳಿಯ ಬೆನ್ನ ಮೇಲೆ ಕುಳಿತುಕೊಂಡಿದೆ. ತನ್ನ ಬೆನ್ನ ಮೇಲೆ ಹತ್ತುತ್ತಿದ್ದಂತೆ ಖುಷಿಯಾದ ಕೋಳಿ, ನಾಯಿ ಮರಿಯನ್ನು ಸುತ್ತಾಡಿಸಿಕೊಂಡು ಬಂದಿದೆ.


ನಾಯಿ ಮರಿಯನ್ನು ಬೆನ್ನ ಮೇಲೆ ಹತ್ತಿಸಿದ ಕೋಳಿ ಮೆಟ್ಟಿಲುಗಳನ್ನು ಹತ್ತಿಸಿ ಸಾಹಸ ಮೆರೆದಿದೆ. ಸ್ವಲ್ಪವೂ ಭಯಗೊಳ್ಳದ ನಾಯಿ ಮರಿ, ಕೋಳಿಯ ಬೆನ್ನ ಮೇಲೆ ಕುಳಿತು ಸುತ್ತಾಡಿ ಖುಷಿಪಟ್ಟಿದೆ.


ಕೋಳಿ ಮತ್ತು ನಾಯಿ ಮರಿಯ ಸುತ್ತಾಟದ ಈ ವಿಡಿಯೋ ಟ್ವಿಟರ್​ನಲ್ಲಿ ಅಪ್ಲೋಡ್ ಆಗುತ್ತಿದ್ದಂತೆ ಸಾಕಷ್ಟು ವೈರಲ್ ಆಗಿದೆ. ಇದನ್ನು ನೋಡಿದ ಜನರು, ಮುದ್ದಾದ ವಿಡಿಯೋ ಎಂದು ಕಮೆಂಟ್ ಮಾಡುತ್ತಿದ್ದಾರೆ. ಟ್ವಿಟರ್​ನಲ್ಲಿ ಈ ವಿಡಿಯೋ ಈಗಾಗಲೇ 2 ಲಕ್ಷಕ್ಕಿಂತಲೂ ಅಧಿಕ ವೀಕ್ಷಣೆ ಪಡೆದುಕೊಂಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net