ಉದ್ದೇಶ ಸ್ಪಷ್ಟವಾಗಿ ಕಾಣುತ್ತಿದೆ; ಕೆ.ಎಲ್​. ರಾಹುಲ್​ ಬಗ್ಗೆ ಶಾಕಿಂಗ್​ ಹೇಳಿಕೆ ಕೊಟ್ಟ ಮಾಜಿ ಕ್ರಿಕೆಟಿಗ

KL Rahul
Published on

ಚೆನ್ನೈ: ಸೆಪ್ಟೆಂಬರ್​ 19ರಂದು ಇಲ್ಲಿನ ಎಂ.ಎ. ಚಿದಂಬರಂ ಕ್ರೀಡಾಂಗಣದಲ್ಲಿ ಆರಂಭವಾಗಿರುವ ಭಾರತ ಹಾಗೂ ಬಾಂಗ್ಲಾದೇಶ ನಡುವಿನ ಎರಡು ಪಂದ್ಯಗಳ ಟೆಸ್ಟ್​ ಸರಣಿಯಲ್ಲಿ ಆತಿಥೇಯರು ಸಂಪೂರ್ಣ ಮೇಲುಗೈ ಸಾಧಿಸಿದ್ದು, ಗೆಲ್ಲುವ ವಿಶ್ವಾಸದೊಂದಿಗೆ ಕಣಕ್ಕಿಳಿದಿದ್ದ ಪ್ರವಾಸಿ ತಂಡಕ್ಕೆ ಆಘಾತ ನೀಡಿದ್ದಾರೆ.

ಟಾಸ್​ ಸೋತು ಮೊದಲು ಬ್ಯಾಟಿಂಗ್​​ಗೆ ಇಳಿದ ಆತಿಥೇಯ ಭಾರತ ತಂಡವು ಎದುರಾಳಿಗಳ ಬೌಲಿಂಗ್​ಗೆ ನಲುಗಿ ಅಲ್ಪಮೊತ್ತಕ್ಕೆ ಕುಸಿಯುವ ಭೀತಿಯಲ್ಲಿತ್ತು. ಈ ವೇಳೆ ತಂಡಕ್ಕೆ ಆಸರೆಯಾದ ಆಲ್ರೌಂಡರ್​ಗಳಾದ ರವೀಂದ್ರ ಜಡೇಜಾ ಹಾಗೂ ಆರ್​. ಅಶ್ವಿನ್​ ಬೃಹತ್​ ಜೊತೆಯಾಟದ ಫಲವಾಗಿ ಭಾರತ ತಂಡ 376 ರನ್​ ಪೇರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಆದರೆ, ಬಹುದಿನಗಳ ನಂತರ ಸಿಕ್ಕ ಅವಕಾಶವನ್ನು ಬಳಸಿಕೊಳ್ಳಲು ವಿಫಲರಾದ ಕನ್ನಡಿಗೆ ಕೆ.ಎಲ್. ರಾಹುಲ್​ ಕೆಂಗಣ್ಣಿಗೆ ಗುರಿಯಾಗಿದ್ದು, ಈ ಬಗ್ಗೆ ವೀಕ್ಷಕ ವಿಚರಣೆಕಾರ ಸಂಜಯ್​ ಮಾಂಜ್ರೇಕರ್​ ಕಿಡಿಕಾರಿದ್ದಾರೆ.

ಖಾಸಗಿ ಸುದ್ದಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಈ ಕುರಿತು ಮಾತನಾಡಿರುವ ಸಂಜಯ್​, ಅನುಭವ ಮತ್ತು ಕ್ಲಾಸ್​ಅನ್ನು ನೋಡಿಕೊಂಡು ಆಯ್ಕೆ ಸಮಿತಿ ಸದಸ್ಯರು ಕೆ.ಎಲ್​. ರಾಹುಲ್​​ಗೆ ಮಣೆ ಹಾಕಿದ್ದಾರೆ. ಇದಲ್ಲದೆ ದಕ್ಷಿಣ ಆಫ್ರಿಕಾ ಹಾಗೂ ಇಂಗ್ಲೆಂಡ್​ ವಿರುದ್ಧದ ಸರಣಿಯಲ್ಲಿ ಅವರು ಬ್ಯಾಟಿಂಗ್​ ಮಾಡಿದಂತಹ ರೀತಿ ಅದ್ಭುತವಾಗಿತ್ತು. ಆದರೆ, ಆತ ಬಾಂಗ್ಲಾ ವಿರುದ್ಧ ಬ್ಯಾಟಿಂಗ್​ ಮಾಡಿದ ರೀತಿ ನೋಡಿದರೆ ಯಾವುದೇ ಉದ್ಧೇಶವಿಲ್ಲದೇ ಆತ ಕಣಕ್ಕಿಳಿದಿದ್ದ ಎಂಬುದು ಸ್ಪಷ್ಟವಾಗಿ ಕಾಣುತ್ತಿತ್ತು.

ಆತ ಎಂತಹ ಆಟಗಾರ ಎಂಬುದು ಎಲ್ಲರಿಗೂ ಗೊತ್ತು. ತಂಡ ಸಂಕಷ್ಟದಲ್ಲಿರುವ ಸಮಯದಲ್ಲಿ ಆತ ತಾಳ್ಮೆ ಕೆಳದುಕೊಳ್ಳದೆ ಆಟವಾಡುವ ರೀತಿ ನೋಡಿದರೆ ರಾಹುಲ್ ಎಂತಹ ಪ್ರತಿಭೆ ಎಂದು ತೋರುತ್ತದೆ. ಆದರೆ, ಇತ್ತೀಚಿನ ದಿನಗಳಲ್ಲಿ ಆತನ ಫಾರ್ಮ್​ ನೋಡಿದರೆ ಎಂತಹವರನ್ನು ಚಿಂತೆಗೆ ದೂಡುತ್ತಿದೆ. ಈ ಬಗ್ಗೆ ಆತ ಗಮನ ಹರಿಸುವುದು ಸೂಕ್ತ ಎಂದು ವೀಕ್ಷಕ ವಿಚರಣೆಕಾರ ಸಂಜಯ್​ ಮಾಂಜ್ರೇಕರ್ ಅಭಿಪ್ರಾಯಪಟ್ಟಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net