ನನ್ನ ಹೆಂಡತಿ, ಮಕ್ಕಳನ್ನು ವಾಪಸ್ ಕಳುಹಿಸಿಕೊಡಿ; ಮೋದಿ ಸರ್ಕಾರಕ್ಕೆ ಪಾಕ್ ಮಹಿಳೆ ಸೀಮಾ ಹೈದರ್ ಪತಿ ಮನವಿ

pakwomen
Published on

ನವದೆಹಲಿ: ಗೇಮಿಂಗ್ ಅಪ್ಲಿಕೇಶನ್ ಪಬ್​​​​ಜಿ ಮೂಲಕ ಭೇಟಿಯಾದ ವ್ಯಕ್ತಿಯೊಂದಿಗೆ ಇರಲು ನೇಪಾಳದ ಮೂಲಕ ಅಕ್ರಮವಾಗಿ ಭಾರತಕ್ಕೆ ಪ್ರವೇಶಿಸಿದ ಪಾಕಿಸ್ತಾನಿ ಮಹಿಳೆ ಸೀಮಾ ಹೈದರ್ ಅವರ ಪತಿ ಗುಲಾಮ್ ಹೈದರ್, ತನ್ನ ಹೆಂಡತಿ ಮತ್ತು ಮಕ್ಕಳನ್ನು ಪಾಕಿಸ್ತಾನಕ್ಕೆ ವಾಪಸ್ ಕಳುಹಿಸುವಂತೆ ಭಾರತ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಪ್ರಸ್ತುತ ಸೌದಿ ಅರೇಬಿಯಾದಲ್ಲಿ ನೆಲೆಸಿರುವ ಗುಲಾಮ್ ಹೈದರ್ ವಿಡಿಯೋ ಮೂಲಕ ಮನವಿ ಮಾಡಿಕೊಂಡಿದ್ದು, ವಿಡಿಯೋದಲ್ಲಿ ಗುಲಾಮ್ ಹೈದರ್ ಈ ವಿಷಯದಲ್ಲಿ ನರೇಂದ್ರ ಮೋದಿ ಸರ್ಕಾರ ಮಧ್ಯಸ್ಥಿಕೆ ವಹಿಸಬೇಕೆಂದು ವಿನಂತಿಸಿಕೊಂಡಿದ್ದಾರೆ.

ತಮ್ಮ ಹೆಂಡತಿ ಮತ್ತು ಮಕ್ಕಳನ್ನು ಅವರ ತಾಯ್ನಾಡಾದ ಪಾಕಿಸ್ತಾನಕ್ಕೆ ಕಳುಹಿಸಿ. ಪಬ್​​​​ಜಿ ಮೂಲಕ ಮೂಲಕ ಭಾರತಕ್ಕೆ ಬರುವಂತೆ ಪತ್ನಿಗೆ ಆಮಿಷವೊಡ್ಡಲಾಗಿದೆ. ಹಾಗಾಗಿ ತಮ್ಮ ಪತ್ನಿ ಮತ್ತು ಮಕ್ಕಳನ್ನು ಸುರಕ್ಷಿತವಾಗಿ ಪಾಕಿಸ್ತಾನಕ್ಕೆ ಹಿಂದಿರುಗಿಸುವಂತೆ ನರೇಂದ್ರ ಮೋದಿ ಸರ್ಕಾರಕ್ಕೆ ಗುಲಾಮ್ ಹೈದರ್ ಮನವಿ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net