ಮಕ್ಕಳೊಂದಿಗೆ ಹಿಂದಿರುಗಿ ಬಾ ಎಂದು ಪತಿ ಮನವಿ; ಗಂಡನಿಗೆ ಪ್ರತಿಕ್ರಿಯಿಸಿದ ಪಾಕಿಸ್ತಾನಿ ಮಹಿಳೆ!

Untitled design (81)
Published on

ನವದೆಹಲಿ: ಪಬ್​​ಜಿ ಆನ್​ಲೈನ್​​ ಗೇಮ್ ಮೂಲಕ ಭಾರತದ ವ್ಯಕ್ತಿಯೊಂದಿಗೆ ಪ್ರೀತಿಯಲ್ಲಿ ಬಿದ್ದ ಪಾಕಿಸ್ತಾನಿ ಮಹಿಳೆ ಸೀಮಾ ಹೈದರ್, ನೇಪಾಳದ ಮೂಲಕ ಭಾರತವನ್ನು ಪ್ರವೇಶಿಸಿ ತಾನು ಪ್ರೀತಿಸಿದ ಯುವಕನ ಜತೆಗೆ ವಾಸವಿರುವ ಸುದ್ದಿ ಇದೀಗ ದೇಶದಲ್ಲಿ ಭಾರೀ ಸಂಚಲನ ಸೃಷ್ಟಿಸಿದೆ.

ಪಾಕಿಸ್ತಾನದ ಮಹಿಳೆ ಸೀಮಾ ಹೈದರ್ ತನ್ನ ನಾಲ್ಕು ಮಕ್ಕಳೊಂದಿಗೆ ಇದೀಗ ಭಾರತಕ್ಕೆ ಬಂದು ಪ್ರೀತಿಸಿದ ವ್ಯಕ್ತಿಯೊಂದಿಗೆ ವಾಸವಿದ್ದಾರೆ. ಇದನ್ನು ತಿಳಿದ ಆಕೆಯ ಪತಿ ಗುಲಾಮ್ ಪಾಕಿಸ್ತಾನಕ್ಕೆ ಮಕ್ಕಳ ಜತೆ ನೀನು ಹಿಂದಿರುಗಿ ಬಾ ಎಂದು ಮನವಿ ಮಾಡಿದ್ದಾರೆ. ಪತಿಯ ಮನವಿಗೆ ಸ್ಪಂದಿಸಿರುವ ಸೀಮಾ, "ಗುಲಾಂ ನಮಗೆ ತೊಂದರೆ ಕೊಡಬೇಡಿ, ಬದುಕಲು ಬಿಡಿ. ನೀವು ಎಲ್ಲಿದ್ದಿರೋ ಅಲ್ಲಿಯೇ ಇರುವುದು ಒಳಿತು. ನಾವು ಇರುವಲ್ಲಿಯೇ ಇರಲು ಬಿಡಿ, ನಿಮ್ಮ ಮೊದಲ ಹೆಂಡತಿ ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳಿ" ಎಂದು ಹೇಳಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net