More

    ಇವರು ಬ್ರ್ಯಾಂಡೆಡ್ ಕಳ್ಳರು: ನಾಲ್ವರಲ್ಲಿ ಒಬ್ಬನನ್ನು ಹಿಡಿದ ದಿಟ್ಟ ಸೆಕ್ಯುರಿಟಿ ಗಾರ್ಡ್ಸ್​​ಗೆ ಪೊಲೀಸರ ಮೆಚ್ಚುಗೆ

    ಬೆಂಗಳೂರು: ಇವರೆಲ್ಲ ಒಂದು ರೀತಿಯಲ್ಲಿ ಬ್ರ್ಯಾಂಡೆಡ್ ಕಳ್ಳರು. ಏಕೆಂದರೆ ಇವರು ಕದಿಯುತ್ತಿದ್ದುದೇ ಬ್ರ್ಯಾಂಡೆಡ್ ಚಪ್ಪಲಿ-ಶೂಗಳನ್ನು. ಮಾರಕಾಸ್ತ್ರಗಳನ್ನು ಹಿಡಿದುಕೊಂಡು ರಾತ್ರಿಯಲ್ಲಿ ಅಪಾರ್ಟ್​​ಮೆಂಟ್​ಗಳಿಗೆ ನುಗ್ಗಿ ಕಳವು ಮಾಡುತ್ತಿದ್ದ ಇವರಲ್ಲಿ ಒಬ್ಬನನ್ನು ಹಿಡಿಯುವಲ್ಲಿ ಭದ್ರತಾ ಸಿಬ್ಬಂದಿ ಸಾಹಸ ಮೆರೆದಿದ್ದಾರೆ.

    ಜ. 27ರಂದು ಬೆಂಗಳೂರಿನ ವೈಟ್​ಫೀಲ್ಡ್ ಪೊಲೀಸ್ ಠಾಣೆ ವ್ಯಾಪ್ತಿಯ ಇಮ್ಮಡಿಹಳ್ಳಿಯ ಸಾನ್ವಿ ಅಪಾರ್ಟ್​ಮೆಂಟ್​ಗೆ ರಾತ್ರಿಯಲ್ಲಿ ನಾಲ್ವರು ಕಳ್ಳರು ನುಗ್ಗಿ ದುಬಾರಿ ಬೆಲೆಯ ಪಾದರಕ್ಷೆಗಳನ್ನು ಕದ್ದೊಯ್ಯಲು ಯತ್ನಿಸಿದ್ದರು.

    ಇವರ ಬಳಿ ಮಾರಕಾಸ್ತ್ರಗಳಿದ್ದರೂ ಹೆದರದ ಸೆಕ್ಯುರಿಟಿ ಗಾರ್ಡ್​ಗಳಾದ ಜಗತ್ ಬೋರಾ ಹಾಗೂ ವಿಜಯ್ ಬೋರಾ ಈ ನಾಲ್ವರ ಪೈಕಿ ಒಬ್ಬನನ್ನು ಹಿಡಿದು ಇನ್ನುಳಿದವರು ಹೆದರಿ ಓಡಿಹೋಗುವಂತೆ ಮಾಡಿದ್ದರು. ಒಬ್ಬನನ್ನು ಹಿಡಿದು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದರು.

    ತಕ್ಷಣ ಸ್ಥಳಕ್ಕೆ ಬಂದ ವೈಟ್​ಫೀಲ್ಡ್ ಪೊಲೀಸರು ಸೆಕ್ಯುರಿಟಿ ಗಾರ್ಡ್​ಗಳ ಕೈಗೆ ಸಿಕ್ಕಿಬಿದ್ದಿದ್ದ ರಾಜು ಎಂಬಾತನನ್ನು ವಶಕ್ಕೆ ಪಡೆದಿದ್ದರು. ರಾಜು ಮತ್ತು ತಂಡ ಬ್ರ್ಯಾಂಡೆಡ್​ ಚಪ್ಪಲಿ-ಶೂ ಕದ್ದು ಅವುಗಳಿಗೆ ಪಾಲಿಷ್ ಮಾಡಿ ರಸ್ತೆಬದಿಯಲ್ಲಿ ಮಾರಾಟ ಮಾಡುತ್ತಿತ್ತು. ಇವರು ಬನ್ನೇರುಘಟ್ಟ ಹಾಗೂ ಮೈಕೋ ಲೇಔಟ್​ ಮುಂತಾದ ಕಡೆಯೂ ಕಳ್ಳತನ ನಡೆಸಿರುವುದು ತಿಳಿದುಬಂದಿದೆ. ಈ ಕಳ್ಳರನ್ನು ಹಿಮ್ಮೆಟ್ಟಿಸುವ ಜತೆಗೆ ಒಬ್ಬನನ್ನು ಹಿಡಿದು ಸಾಹಸ ಮೆರೆದ ಸೆಕ್ಯುರಿಟಿ ಗಾರ್ಡ್​ಗಳಿಗೆ ಡಿಸಿಪಿ ಎಸ್​.ಗಿರೀಶ್​ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಇವರು ಬ್ರ್ಯಾಂಡೆಡ್ ಕಳ್ಳರು: ನಾಲ್ವರಲ್ಲಿ ಒಬ್ಬನನ್ನು ಹಿಡಿದ ದಿಟ್ಟ ಸೆಕ್ಯುರಿಟಿ ಗಾರ್ಡ್ಸ್​​ಗೆ ಪೊಲೀಸರ ಮೆಚ್ಚುಗೆ

    ಅದರಲ್ಲಿ ಪೊಲೀಸರ ತಪ್ಪಿಲ್ಲ, ಇದರಲ್ಲಿ ತಪ್ಪಿತ್ತು..: ಸಂಚಾರ ಪೊಲೀಸರ ವಿರುದ್ಧದ ಟೀಕೆಗಳಿಗೆ ರವಿಕಾಂತೇಗೌಡ ಲಿಖಿತ ಉತ್ತರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts