

ಚಂಡಿಗಢ: ಖ್ಯಾತ ಗಾಯಕನ ಹತ್ಯೆ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಪಂಜಾಬ್ ಸರ್ಕಾರ ರದ್ದುಪಡಿಸಿದ್ದ ಭದ್ರತೆಯನ್ನು ವಾಪಸ್ ನೀಡಿದೆ.
ಗಾಯಕ ಸಿಧು ಮೂಸೆವಾಲ ಅವರಿಗೆ ನೀಡಲಾಗಿದ್ದ ಭದ್ರತೆಯನ್ನು ವಾಪಸ್ ಪಡೆದುಕೊಂಡಿದ್ದ ಒಂದು ದಿನದ ಬಳಿಕವೇ ಅವರ ಹತ್ಯೆಯಾಗಿತ್ತು. ಇದರಿಂದ ಆಪ್ ಸರ್ಕಾರದ ವಿರುದ್ಧ ಆರೋಪ ಕೇಳಿಬಂದಿತ್ತು.
ರಾಜಕೀಯ ದುರುದ್ದೇಶದಿಂದ ಭದ್ರತೆಯನ್ನು ಅವಲೋಕಿಸದೇ ವಾಪಸ್ ಪಡೆದಿದ್ದಕ್ಕೆ ಸಿಧು ಅವರ ಹತ್ಯೆಯಾಗಿದೆ ಎಂದು ವಿಪಕ್ಷಗಳು ಸರ್ಕಾರದ ವಿರುದ್ಧ ಮುಗಿಬಿದ್ದಿದ್ದವು. ಇದರಿಂದ ಎಚ್ಚೆತ್ತುಕೊಂಡ ಸರ್ಕಾರ 400 ಮಂದಿಯಿಂದ ವಾಪಸ್ ಪಡೆದಿದ್ದ ಭದ್ರತೆಯನ್ನು ಮತ್ತೆ ನೀಡುವುದಾಗಿ ತಿಳಿಸಿದೆ.
ಜೂನ್ 7 ರಿಂದ ಮತ್ತೆ 420 ಮಂದಿಗೆ ಭದ್ರತೆಯನ್ನು ವಾಪಸ್ ನೀಡಲಿದ್ದೇವೆ ಎಂದು ಪಂಜಾಬ್ ಸರ್ಕಾರ ಹೇಳಿಕೊಂಡಿದೆ. ವಿವಿಐಪಿಗಳಿಗೆ ಭದ್ರತೆಯನ್ನು ಮತ್ತೆ ನೀಡಲಾಗುವುದು ಎಂದು ಪಂಜಾಬ್ ಸರ್ಕಾರ ಇಂದು ಹೇಳಿದೆ, ಗಾಯಕ ಸಿಧು ಮೂಸ್ ವಾಲಾ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಿದ ಐದು ದಿನಗಳ ನಂತರ - ಅವರ ಭದ್ರತೆಯನ್ನು ಮೊಟಕುಗೊಳಿಸಲಾಯಿತು.(ಏಜೆನ್ಸೀಸ್)