ಮದ್ಯ ಪ್ರಿಯರಿಗೆ ಸಿಹಿಸುದ್ದಿ: ಆರ್ಡರ್​ ಮಾಡಿದ 10 ನಿಮಿಷದಲ್ಲಿ ಮನೆ ಬಾಗಿಲಿಗೆ ಬರಲಿದೆ ನಿಮ್ಮಿಷ್ಟದ ಬ್ರಾಂಡ್​​!

Liqer
Published on

ಕೋಲ್ಕತ್ತಾ: ಇಂದಿನ ದಿನಗಳಲ್ಲಿ ಆನ್​ಲೈನ್​ ಮಾರಾಟ ಭಾರೀ ಜನಪ್ರಿಯತೆ ಪಡೆದುಕೊಳ್ಳುತ್ತಿದ್ದು, ಮನೆಯಲ್ಲಿದ್ದೇ ಬೇಕಾದ ವಸ್ತುಗಳನ್ನು ಖರೀದಿ ಮಾಡಬಹುದು.

ತರಕಾರಿ, ದಿನಸೀ, ಬಟ್ಟೆ ಹೀಗೆ ಎಲ್ಲವೂ ಮನೆಬಾಗಿಲಿಗೆ ಬಂದುಬಿಡುತ್ತದೆ. ಈಗ ಮದ್ಯಪ್ರಿಯರೂ ಕೂಡ ಮನೆಯಲ್ಲಿದ್ದೂ ತಮಗಿಷ್ಟವಾದ ಬ್ರಾಂಡ್​​ ಅನ್ನು ಖರೀದಿಸಬಹುದು. ಸಂಸ್ಥೆಯೊಂದು ಮನೆ ಬಾಗಿಲಿಗೇ ಮದ್ಯವನ್ನು ತಲುಪಿಸುತ್ತೇವೆ ಎಂದು ಹೇಳುವ ಮೂಲಕ ಮದ್ಯಪ್ರಿಯರಿಗೆ ಸಿಹಿಸುದ್ದಿ ನೀಡಿದೆ.

ಆರ್ಡರ್​ ಮಾಡಿದ ಕೆಲವೇ ಗಂಟೆಗಳಲ್ಲಿ ಮಾರುಕಟ್ಟೆಯಲ್ಲಿ ಸಿಗುವ ಎಲ್ಲಾ ವಸ್ತುಗಳು ಮನೆ ಬಾಗಿಲಿಗೆ ಬಂದು ತಲುಪುತ್ತವೆ. ಆದರೆ ಈಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿರುವ ಸಂಸ್ಥೆಗಳು ಮದ್ಯಪ್ರಿಯರಿಗೂ ಇಂತಹ ಅವಕಾಶವನ್ನು ನೀಡಿದೆ.

ಆರ್ಡರ್​​ ಮಾಡಿ 10 ನಿಮಿಷದಲ್ಲೇ ಮನೆ ಬಾಗಿಲಿಗೆ ಬರುತ್ತೆ ಎಂದು ಹೈದರಾಬಾದ್ ಮೂಲದ ಸ್ಟಾರ್ಟ್​​ ಅಪ್​ ಕಂಪನಿ ಹೇಳಿಕೊಂಡಿದೆ.ಬೂಜಿ ಹೆಸರಿನ ಈ ಖಾಸಗಿ ಸಂಸ್ಥೆ ಮದ್ಯವನ್ನು ಆರ್ಡರ್​​ ಮಾಡಿದ ಕೆಲವೇ ನಿಮಿಷದಲ್ಲೇ ತಲುಪಿಸುತ್ತೇವೆ ಎಂದು ಘೋಷಿಸಿಕೊಂಡಿದೆ. ಸದ್ಯಕ್ಕೆ ಕೋಲ್ಕತ್ತಾ ನಗರದಲ್ಲಿ ಮಾತ್ರ ತನ್ನ ಸೇವೆ ನೀಡಲಿದ್ದು, ನಂತರದ ದಿನಗಳಲ್ಲಿ ಇತರೆ ನಗರಗಳಲ್ಲಿಯೂ ಸೇವೆ ಆರಂಭಿಸಲಾಗುವುದು ಎಂದು ಹೇಳಿದೆ.

ಕೆಲವು ಸಂಸ್ಥೆಗಳಲ್ಲಿ ಈಗಾಗಲೇ ಮಾರಾಟ ಮಾಡುತ್ತಿವೆ. ಆದರೆ ನಾವು ಅವರಿಗಿಂತ ವೇಗವಾಗಿ ನಿಮ್ಮ ಮನೆ ಬಾಗಿಲಿಗೆ ನಿಮಗಿಷ್ಟವಾದ ಮದ್ಯವನ್ನು ತಂದುಕೊಡುತ್ತೇವೆ ಎಂದು ತನ್ನ ಗ್ರಾಹಕರಿಗೆ ಈ ಸಂಸ್ಥೆ ಭರವಸೆ ನೀಡಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net