ದ್ವಿತೀಯ ಪಿಯು ರಿಸಲ್ಟ್ ಬಗ್ಗೆ ಸಮಾಧಾನವಿಲ್ಲವೇ? ಇಲ್ಲಿದೆ ನಿಮಗೊಂದು ಅವಕಾಶ

second pu
Published on

ಬೆಂಗಳೂರು: ರಾಜ್ಯದ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಫಲಿತಾಂಶ ಇಂದು ಹೊರಬಿದ್ದಿದೆ. ಪರೀಕ್ಷೆ ನಡೆಸದೆಯೇ ವಿದ್ಯಾರ್ಥಿಗಳ ಈ ಹಿಂದಿನ ಫಲಿತಾಂಶವನ್ನೇ ಆಧರಿಸಿ ಫಲಿತಾಂಶ ಕೊಡಲಾಗಿದೆ. ಆದರೆ ಅನೇಕ ವಿದ್ಯಾರ್ಥಿಗಳಿಗೆ ಫಲಿತಾಂಶದ ಬಗ್ಗೆ ಅಸಮಾಧಾನವಿದ್ದು, ಅಂತವರಿಗಾಗಿ ಮತ್ತೊಂದು ಅವಕಾಶ ನೀಡಲಾಗಿದೆ.

ಒಂದು ವೇಳೆ ಈ ವರ್ಷದ ದ್ವಿತೀಯ ಪಿಯು ಫಲಿತಾಂಶ ಪಡೆದ ಯಾವುದೇ ವಿದ್ಯಾರ್ಥಿಗೆ ಯಾವುದೇ ವಿಷಯದಲ್ಲಿ ಪರೀಕ್ಷೆ ಬರೆದಿದ್ದರೆ ಈಗ ಬಂದಿರುವ ಅಂಕಗಳಿಗಿಂತ ಹೆಚ್ಚಿನ ಅಂಕ ಬರುತ್ತಿತ್ತು ಎನ್ನುವ ನಂಬಿಕೆಯಿದ್ದರೆ ಅಂತಹ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯುವುದಕ್ಕೆ ಅವಕಾಶವಿದೆ. ಆ ಪರೀಕ್ಷೆಯ ಇದೇ ಆಗಸ್ಟ್ ತಿಂಗಳಲ್ಲಿ ಅದರ ವೇಳಾಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ.

ಫಲಿತಾಂಶದ ಬಗ್ಗೆ ಅಸಮಾಧಾನ ಹೊಂದಿರುವ ಹೊಸ ವಿದ್ಯಾರ್ಥಿಗಳು, ಪುನರಾವರ್ತಿತರು ಹಾಗೂ ಖಾಸಗಿ ಅಭ್ಯರ್ಥಿಗಳು ಈ ಅವಕಾಶ ಬಳಸಿಕೊಳ್ಳಬಹುದು. ಪರೀಕ್ಷೆ ಬರೆಯಲು ಇಚ್ಛಿಸುವ ವಿದ್ಯಾರ್ಥಿಗಳು ಕಾಲೇಜಿಗೆ ಹೋಗಿ ಪ್ರಾಂಶುಪಾಲರಿಗೆ ವಿಷಯ ಮುಟ್ಟಿಸಬೇಕು. ಆ ಪ್ರಾಂಶುಪಾಲರು ಜುಲೈ 30ರೊಳಗೆ ಪರೀಕ್ಷೆ ಬರೆಯಲಿಚ್ಛಿಸುವ ಮಾಹಿತಿಯನ್ನು SATS portalನಲ್ಲಿ ಅಪ್​ಡೇಟ್ ಮಾಡಬೇಕು. ನಂತರ ಡಿಡಿಪಿಯು ಮಟ್ಟದಲ್ಲಿ ಅರ್ಜಿ ಪರಿಶೀಲನೆಗೆ ಜು.31 ಹಾಗೂ ಕೇಂದ್ರ ಕಚೇರಿಗೆ ತಲುಪಿಸಲು ಆಗಸ್ಟ್ 2 ಕೊನೆಯ ದಿನಾಂಕವೆಂದು ತಿಳಿಸಿದ್ದಾರೆ.

ಆಗಸ್ಟ್​ನಲ್ಲಿ ನಡೆಯುವ ಪರೀಕ್ಷೆಯ ವೇಳಾಪಟ್ಟಿ ಈ ಕೆಳಗಿನಂತಿದೆ.

ಆ.19 - ಐಚ್ಛಿಕ ಕನ್ನಡ, ಗಣಿತ, ಬೇಸಕ್ ಮ್ಯಾಥ್ಸ್

ಆ.21 - ಕನ್ನಡ, ತಮಿಳು, ತೆಲಗು, ಮಲಯಾಳಂ, ಮರಾಠಿ, ಅರೇಬಿಕ್, ಫ್ರೆಂಚ್

ಆ.23 - ಭೂಗೋಳಶಾಸ, ಮನಃಶಾಸ, ಭೌತಶಾಸ

ಆ.24 - ಇಂಗ್ಲಿಷ್

ಆ.25 - ಲೆಕ್ಕಶಾಸ, ಭೂಗರ್ಭಶಾಸ, ಶಿಕ್ಷಣ, ಗೃಹ ವಿಜ್ಞಾನ

ಆ.26 - ರಾಜ್ಯಶಾಸ

ಆ.27 - ಇತಿಹಾಸ, ಲೆಕ್ಕಶಾಸ

ಆ.30 - ಅರ್ಥಶಾಸ,

ಆ.31 - ಉರ್ದು, ಸಂಸ್ಕೃತ

ಸೆ.1 - ಕರ್ನಾಟಕ ಸಂಗೀತ, ಹಿಂದುಸ್ತಾನಿ ಸಂಗೀತ, ಸಮಾಜಶಾಸ, ಜೀವವಿಜ್ಞಾನ, ಎಲೆಕ್ಟ್ರಾನಿಕ್ಸ್, ಕಂಪ್ಯೂಟರ್ ಸೈನ್ಸ್

ಸೆ.2 - ತರ್ಕಶಾಸ, ವ್ಯವಹಾರ ಅಧ್ಯಯನ, ರಸಾಯನಶಾಸ

ಸೆ.3 - ಹಿಂದಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net