ಚಿನ್ನದ ಫೆರಾರಿ ಕಾರನ್ನ ಎಲ್ಲಾದರು ಕಂಡಿರಾ? ಆನಂದ್ ಮಹೀಂದ್ರಾ ಸಿಟ್ಟಿಗೆ ಕಾರಣವಾಯ್ತು ಈ ವಿಡಿಯೋ

car
Published on

ಮುಂಬೈ: ನಿಮ್ಮ ಬಳಿ ರಾಶಿ ಹಣವಿದ್ದರೆ ಏನು ಮಾಡುತ್ತೀರ? ಎಲ್ಲಾದರೂ ಒಂದು ಕಡೆ ಹೂಡಿಕೆ ಮಾಡುತ್ತೀರಲ್ಲವೇ? ಆದರೆ ಕೆಲವರು ಇರುವ ದುಡ್ಡಲ್ಲಿ ದರ್ಬಾರ್ ಮಾಡಿಬಿಡುತ್ತಾರೆ. ಅದೇ ರೀತಿ ಹಣವಿದೆ ಎಂದು ತೋರಿಕೆಗೆ ಬಳಸಿಕೊಂಡ ವ್ಯಕ್ತಿಯೊಬ್ಬನ ಬಗ್ಗೆ ಮಹೀಂದ್ರಾ ಸಂಸ್ಥೆಯ ಮುಖ್ಯಸ್ಥ ಆನಂದ್ ಮಹೀಂದ್ರಾ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.

ಇಂಡಿಯನ್-ಅಮೆರಿಕನ್ ವ್ಯಕ್ತಿಯೊಬ್ಬ ಅಪ್ಪಟ ಚಿನ್ನದಲ್ಲಿ ಫೆರಾರಿ ಕಾರನ್ನು ಮಾಡಿಸಿಕೊಂಡಿದ್ದಾನೆ. ಅದರಲ್ಲಿ ಶೋ ತೋರಿಸುತ್ತಾ ಪ್ರಯಾಣ ಮಾಡುವ ವಿಡಿಯೋವನ್ನು ಆನಂದ್ ಮಹೀಂದ್ರಾ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಮನುಷ್ಯ ಶ್ರೀಮಂತನಾದರೆ ಏನು ಮಾಡಬಾರದು ಎನ್ನುವುದಕ್ಕೆ ಈ ವಿಡಿಯೋ ಸಾಕ್ಷಿ ಎಂದು ಬರೆದುಕೊಂಡಿದ್ದಾರೆ.

ಅವರ ಈ ಟ್ವೀಟ್ ಭಾರೀ ವೈರಲ್ ಆಗಿದೆ. ಸಾಕಷ್ಟು ಜನರು ವಿಡಿಯೋಗೆ ಪ್ರತಿಕ್ರಿಯಿಸಲಾರಂಭಿಸಿದ್ದಾರೆ. ಸಾವಿರಾರು ಜನರು ವಿಡಿಯೋ ಶೇರ್ ಮಾಡುತ್ತಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net