ಕ್ವಿಜ್‌ನಲ್ಲಿ ಜ್ಞಾನಸುಧಾ ಕಾಲೇಜು ದ್ವಿತೀಯ

anamaya
ಅನಮಯ ಯೋಗೀಶ್ ದಿವಾಕರ್, ಅನಿರುದ್ಧ್ ರವಿರಾಜ್ ಉಡುಪ.
Published on

ಕಾರ್ಕಳ: ಅಂತಾರಾಷ್ಟ್ರೀಯ ಹೃದಯ ದಿನಾಚರಣೆ ಅಂಗವಾಗಿ ಆದರ್ಶ ಸಮೂಹ ಸಂಸ್ಥೆಗಳು ಮತ್ತು ಉಡುಪಿ ಆದರ್ಶ ಆಸ್ಪತ್ರೆ ಆಶ್ರಯದಲ್ಲಿ ನಡೆದ ಕ್ವಿಜ್‌ನಲ್ಲಿ ಉಡುಪಿ ಜ್ಞಾನಸುಧಾ ಪದವಿಪೂರ್ವ ಕಾಲೇಜಿನ ಪ್ರಥಮ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಾದ ಅನಮಯ ಯೋಗೀಶ್ ದಿವಾಕರ್ ಮತ್ತು ಅನಿರುದ್ಧ್ ರವಿರಾಜ್ ಉಡುಪ ದ್ವಿತೀಯ ಸ್ಥಾನ ಪಡೆದಿದ್ದಾರೆ. ಸಾಧಕ ವಿದ್ಯಾರ್ಥಿಗಳನ್ನು ಅಜೆಕಾರು ಪದ್ಮಗೋಪಾಲ್ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ಡಾ.ಸುಧಾಕರ್ ಶೆಟ್ಟಿ, ಪ್ರಾಂಶುಪಾಲರು,ಬೋಧಕ, ಬೋಧಕೇತರ ಸಿಬ್ಬಂದಿ ಅಭಿನಂದಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net