

ವಿಜಯವಾಣಿ ಸುದ್ದಿಜಾಲ ಕೋಟ
ಗಿಳಿಯಾರು ಹರ್ತಟ್ಟುವಿನ ಕಲ್ಲಟ್ಟು ಶ್ರೀ ಮಹಾಲಿಂಗೇಶ್ವರ ದೇಗುಲದ ದ್ವಿತೀಯ ವರ್ಧಂತಿ ಉತ್ಸವ ಪ್ರಧಾನ ಅರ್ಚಕ ಸುಧೀರ್ ಐತಾಳ್ ನೇತೃತ್ವದಲ್ಲಿ ಸಂಪನ್ನಗೊಂಡಿತು.
ಬೆಳಗ್ಗೆ ದೇವರಿಗೆ ನವಕ ಪ್ರಧಾನ ದ್ರವ್ಯ ಕಲಶ ಸ್ನಪನಾಧಿವಾಸ ಹೋಮ, ಕಲಶಾಭಿಷೇಕ, ಮಹಾಪೂಜೆ ಜರುಗಿದವು. ಮಧ್ಯಾಹ್ನ ಅನ್ನಸಂತರ್ಪಣೆ, ಕೋಟ ಪಂಚವರ್ಣ ಮಹಿಳಾ ಭಜನಾ ತಂಡ ಮತ್ತು ಸಾಲಿಗ್ರಾಮ ವಿಪ್ರ ಮಹಿಳಾ ವಲಯದಿಂದ ಭಜನೆ, ರಾತ್ರಿ ಮಹಾರಂಗಪೂಜೆ ನೆರವೇರಿತು.
ಆಡಳಿತ ಮಂಡಳಿ ಅಧ್ಯಕ್ಷ ಶೇವಧಿ ಸುರೇಶ್ ಗಾಣಿಗ, ಅಂಬಿಕಾ ಎಸ್.ಗಾಣಿಗ, ಪ್ರಮುಖರಾದ ಹರೀಶ್ ದೇವಾಡಿಗ, ಗೋಪಾಲಕೃಷ್ಣ ಮಯ್ಯ, ಚಂದ್ರಿಕಾ ಭಟ್, ಸಿದ್ಧ ದೇವಾಡಿಗ, ಶೇಖರ್ ದೇವಾಡಿಗ, ತಿಮ್ಮ ಕಾಂಚನ್, ಶೇವಧಿ ನಾಗರಾಜ್ ಗಾಣಿಗ, ಸಂತೋಷ್ ಪೂಜಾರಿ, ರಾಜು ಪೂಜಾರಿ ಹೋಬಳಿಮನೆ, ಗಿರೀಶ್ ದೇವಾಡಿಗ, ಬಾಬು ಶೆಟ್ಟಿ, ಚಂದ್ರ ಹಾಡಿಕೆರೆ, ಶಾಂತಾ ಪ್ರಕಾಶ್, ಸಂತೋಷ್ ದೇವಾಡಿಗ, ಕೀರ್ತೀಶ್ ಪೂಜಾರಿ, ಪ್ರದೀಪ್ ದೇವಾಡಿಗ, ಆದರ್ಶ ಶೆಟ್ಟಿ ಮತ್ತಿತರರಿದ್ದರು.