ಎಂಎಸ್​ಡಿ ಬರ್ತ್​ಡೇ ಸ್ಪೆಷಲ್: ಈ ಫೋಟೋದಲ್ಲಿ ಧೋನಿ ಎಲ್ಲಿದ್ದಾರೆ ಹುಡುಕಿ

msd
Published on

ನವದೆಹಲಿ: ಕ್ಯಾಪ್ಟನ್ ಕೂಲ್ ಎಂದೇ ಕರೆಸಿಕೊಳ್ಳುವ ಕ್ರಿಕೆಟ್ ಆಟಗಾರ ಮಹೇಂದ್ರ ಸಿಂಗ್​ ಧೋನಿಗೆ ಇಂದು 40ನೇ ವರ್ಷದ ಜನ್ಮ ದಿನದ ಸಂಭ್ರಮ. ಕ್ರಿಕೆಟ್ ಇತಿಹಾಸದಲ್ಲಿ ಶ್ರೇಷ್ಠ ನಾಯಕರಲ್ಲಿ ಒಬ್ಬರಾದ ಎಂಎಸ್​ಡಿ ಬರ್ತ್​ಡೇಗೆ ಪೂರ್ತಿ ಭಾರತವೇ ಶುಭ ಹಾರೈಸುತ್ತಿದೆ.

ಈ ಶುಭ ದಿನದಂದು ನಿಮಗೊಂದು ಟಾಸ್ಕ್​ ಅನ್ನು ಧೋನಿ ಅಭಿಮಾನಿಗಳ ಪೇಜ್ ಒಂದು ನೀಡಿದೆ. ಧೋನಿ ಅವರು ತಮ್ಮ ಪ್ರಾರ್ಥಮಿಕ ಶಾಲೆಯಲ್ಲಿ ಓದುತ್ತಿದ್ದಾಗ ತೆಗೆಸಿಕೊಂಡಿದ್ದ ಗ್ರೂಪ್​ ಫೋಟೋವನ್ನು ಹುಡುಕಿ ಹಾಕಲಾಗಿದ್ದು, ಆ ಫೋಟೋದಲ್ಲಿ ಧೋನಿಯನ್ನು ಹುಡುಕುವ ಟಾಸ್ಕ್ ನೀಡಲಾಗಿದೆ.

ಈಗಾಗಲೇ ಸಾವಿರಾರು ಅಭಿಮಾನಿಗಳು ಅದರಲ್ಲಿ ಧೋನಿ ಯಾರೆಂದು ಹುಡುಕಲು ಆರಂಭಿಸಿದ್ದಾರೆ. ನೀವು ಆ ಫೋಟೋ ನೋಡಿ. ಅದರಲ್ಲಿ ಧೋನಿಯನ್ನು ಹುಡುಕುವ ಪ್ರಯತ್ನ ಮಾಡಿ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net