ಲಖನೌ: ಅಣ್ಣನೊಬ್ಬ ಪ್ರೀತಿಸಿ ಯುವತಿಯೊಂದಿಗೆ ಓಡಿ ಹೋದ ಎನ್ನುವ ಕಾರಣಕ್ಕೆ ಯುವತಿಯ ಕುಟುಂಬಸ್ಥರು ಆ ಯುವಕನ ತಂಗಿಯನ್ನೇ ಆಕೆಯ ಅಪ್ಪ ಅಮ್ಮನ ಎದುರೇ ಗ್ಯಾಂಗ್ರೇಪ್ ಮಾಡಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

ಉತ್ತರ ಪ್ರದೇಶದ ಅಮ್ರೋಹಾ ರೈಲ್ವೆ ನಿಲ್ದಾಣದ ಬಳಿ ಇಂತದ್ದೊಂದು ಘಟನೆ ನಡೆದಿದೆ. ಅಪ್ಪ, ಅಮ್ಮ, ಮಗ ಮತ್ತು 16 ವರ್ಷದ ಮಗಳ ಕುಟುಂಬವದು. ಅದರಲ್ಲಿ ಮಗ ಇತ್ತೀಚೆಗೆ ಯುವತಿಯೊಬ್ಬಳನ್ನು ಪ್ರೀತಿಸಿದ್ದು, ಜೂನ್ 27ರಂದು ಆಕೆಯೊಂದಿಗೆ ಓಡಿ ಹೋಗಿದ್ದಾನೆ. ಇದರಿಂದಾಗಿ ಸಿಟ್ಟಾಗಿದ್ದ ಯುವತಿಯ ಕುಟುಂಬ ಯುವಕನ ಕುಟುಂಬವನ್ನು ಜೂನ್ 28ರಂದು ಎಳೆದುಕೊಂಡು ತಮ್ಮ ಊರಿಗೆ ಕರೆದುಕೊಂಡು ಹೋಗಿ ಕೂಡಿ ಹಾಕಿಕೊಂಡಿದ್ದಾರೆ. ಅದೇ ದಿನ ಅವರ ಮಗಳ ಮೇಲೆ ಯುವತಿಯ ಅಣ್ಣಂದಿರು ಹಾಗೂ ಚಿಕ್ಕಪ್ಪಂದಿರೆಲ್ಲರೂ ಸೇರಿಕೊಂಡು ಗ್ಯಾಂಗ್ರೇಪ್ ನಡೆಸಿದ್ದಾರೆ. ಒಟ್ಟು 8 ಮಂದಿ ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾರೆ. ಅದಾದ ಮೇಲೆ ಅವರಲ್ಲೇ ಒಬ್ಬ ಆಕೆಯನ್ನು ಮದುವೆಯನ್ನೂ ಆಗಿದ್ದಾನಂತೆ. ಈ ಎಲ್ಲ ಘಟನೆ ಆಕೆಯ ಅಪ್ಪ ಅಮ್ಮನ ಎದುರೇ ನಡೆದಿದೆ.
ಇದಾದ ಮೇಲೆ ಜೂನ್ 29ರಂದು ಬಾಲಕಿಯನ್ನು ಅಲ್ಲೇ ಇಟ್ಟುಕೊಂಡು, ಅವಳ ಅಪ್ಪ ಅಮ್ಮನಿಗೆ ಮನೆಗೆ ಹೋಗಲು ಹೇಳಲಾಗಿದೆ. ಇಲ್ಲಿ ನಡೆದ ವಿಚಾರವನ್ನು ಪೊಲೀಸರಿಗೆ ಹೇಳಿದರೆ ನಿಮ್ಮ ಮಗಳನ್ನು ಕೊಲೆ ಮಾಡುತ್ತೇವೆ ಎಂದು ಬೆದರಿಸಲಾಗಿದೆ. ಆದರೆ ಧೈರ್ಯ ತೆಗೆದುಕೊಂಡ ಪೋಷಕರು ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದು ಪ್ರಕರಣ ದಾಖಲಿಸಿಕೊಳ್ಳಲಾಗಿದೆ. (ಏಜೆನ್ಸೀಸ್)
ಕೇಂದ್ರ ಸಚಿವ ಸಂಪುಟ ಪುನರ್ರಚನೆ: ಇಂದು ಪ್ರಮಾಣವಚನ ಸ್ವೀಕರಿಸುವುದು 43 ಸಚಿವರು!
7ನೇ ತರಗತಿ ವಿದ್ಯಾರ್ಥಿನಿಯನ್ನೇ ತಾಯಿ ಮಾಡಿದ ಸಹಪಾಠಿ! ರೇಪ್ ಮಾಡಿ ಬಾಂಗ್ಲಾಕ್ಕೆ ಹಾರಿದ ಆರೋಪಿ
ಟಾಯ್ಲೆಟ್ನಲ್ಲಿ ಕುಳಿತಿದ್ದವನ ಮರ್ಮಾಂಗಕ್ಕೇ ಕಚ್ಚಿದ ಹಾವು! ಬೆಚ್ಚಿ ಬೀಳಿಸುವ ಘಟನೆ