More

  ಟ್ರಾಫಿಕ್​ ಸಿಬ್ಬಂದಿ​ಗೆ ಥಳಿಸಿದ ನಟಿ ಟಿವಿ ಸಂದರ್ಶನದಲ್ಲಿ ಕ್ಷಮೆಯಾಚಿಸಿದಳು!

  ಹೈದರಾಬಾದ್​: ವಿರುದ್ಧ ದಿಕ್ಕಿನಲ್ಲಿ ವಾಹನ ಚಲಾಯಿಸುತ್ತ ಬಂದಿದ್ದಲ್ಲದೆ, ಕರ್ತವ್ಯ ನಿರತ ಟ್ರಾಫಿಕ್ ಸಿಬ್ಬಂದಿಗೆ ಹಿಗ್ಗಾಮುಗ್ಗ ಥಳಿಸಿ ಪರಾರಿಯಾಗಿದ್ದ ನಟಿ ಸೌಮ್ಯಾ ಜಾನುಗೆ ಬಂಜಾರಹಿಲ್ಸ್ ಪೊಲೀಸರು ನೋಟಿಸ್​ ನೀಡಿದ್ದಾರೆ.

  ಇದನ್ನೂ ಓದಿ: ಮಾಜಿ ಸಂಸದೆ ಹಾಗೂ ನಟಿ ಜಯಪ್ರದಾ ತಲೆಮರೆಸಿಕೊಂಡಿದ್ದಾರೆ ಎಂದು ಘೋಷಿಸಿದ ನ್ಯಾಯಾಲಯ

  ಇದೇ ತಿಂಗಳ 24ರಂದು ರಾತ್ರಿ ಬಂಜಾರ ಹಿಲ್ಸ್‌ ರಸ್ತೆ 12ರ ಅಗ್ರಸೇನ್‌ ಅಡ್ಡರಸ್ತೆಯಲ್ಲಿ ವಿರುದ್ಧ ದಿಕ್ಕಿನಲ್ಲಿ ಜಾಗ್ವಾರ್‌ ಕಾರಿನಲ್ಲಿ ಬಂದ ಮಹಿಳೆ ಅಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಬಂಜಾರಾ ಹಿಲ್ಸ್‌ ಸಂಚಾರ ಗೃಹರಕ್ಷಕ ವಿಘ್ನೇಶ್‌ ಅವರ ಜತೆ ಅನುಚಿತವಾಗಿ ವರ್ತಿಸಿ ಲೈಫ್‌ ಜಾಕೆಟ್‌ ಹರಿದು ಮೊಬೈಲ್​ ಅಪಹರಿಸಿ,  ಅಷ್ಟೇ ಅಲ್ಲದೆ ಆತನ ಕೈ ಮುರಿದು ಬಳಿಕ ಪರಾರಿಯಾಗಿದ್ದಳು.

  ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದ ಬಂಜಾರಹಿಲ್ಸ್​ ಪೊಲೀಸರು, ಮೊದಲು ಸಿಸಿ ಕ್ಯಾಮೆರಾಗಳನ್ನು ಪರಿಶೀಲನೆ ನಡೆಸಿ ಆಕೆಯ ಕಾರವಾನ್ ಅನ್ನು ಪತ್ತೆಹಚ್ಚಿದ್ದು, ಬಳಿಕೆ ನಟಿ ಸೌಮ್ಯಜಾನುಗೆ ಸೇರಿದ್ದು ಎಂಬುದನ್ನು ಕಂಡುಕೊ ಳ್ಳಲಾಯಿತು. ಆಕೆ ಮನೆಗೆ ನೋಟಿಸ್ ತಲುಪಿಸಿದ್ದು, ಮನೆಯಲ್ಲಿ ಆಕೆ ಸಿಗಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಅಲ್ಲದೆ, ಆಕೆಯ ಕಾರವಾನ್ ಸಹ ಲಭ್ಯವಿಲ್ಲ. ಆದರೂ ಆಕೆಯನ್ನು ಪತ್ತೆಹಚ್ಚಲು ಪ್ರಯತ್ನಿಸುತ್ತಿದ್ದೇವೆ ಎಂದಿದ್ದಾರೆ.

  ನನ್ನನ್ನು ಕ್ಷಮಿಸಿ: ಮತ್ತೊಂದೆಡೆ, ಟಿವಿ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಸೌಮ್ಯಾ, ತುರ್ತು ವೈದ್ಯಕೀಯ ಸಹಾಯಕ್ಕಾಗಿ ನಾನು ರಂಗ್‌ರೂಟ್‌ಗೆ ಹೋಗಿದ್ದೆ. ನನ್ನನ್ನು ಕ್ಷಮಿಸುವಂತೆ ಪೊಲೀಸರನ್ನು ಕೇಳಿಕೊಂಡಿದ್ದೇನೆ ಎಂದು ಹೇಳಿದ್ದಾಳೆ.

  ಕರ್ತವ್ಯ ನಿರತ ಟ್ರಾಫಿಕ್​ ಸಿಬ್ಬಂದಿ ನಿಂದಿಸಿದ್ದರಿಂದ ಪ್ರತಿಕ್ರಿಯೆ ನೀಡಬೇಕಾಯಿತು ಎಂದಿದ್ದಾಳೆ. ನಾನು ಯಾರ ಮೇಲೂ ಹಲ್ಲೆ ನಡೆಸಿಲ್ಲ ಮತ್ತು ಪೊಲೀಸರನ್ನು ತನಿಖೆಗೆ ಕರೆದಿಲ್ಲ ಎಂದು ಹೇಳಿದ್ದಾಳೆ.

  India Vs England: 4ನೇ ಟೆಸ್ಟ್​ನಲ್ಲಿ ಭಾರತ ಗೆಲುವು.. ಸೀರೀಸ್​ ಕೈವಶ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts