ವಿಜಯವಾಣಿ ಸುದ್ದಿಜಾಲ ಉಡುಪಿ
ಉಡುಪಿ ಜಿಲ್ಲೆಯಲ್ಲಿ ಮಳೆ ಆರ್ಭಟ ಇಳಿದಿದ್ದರೂ ಸಾರ್ವಜನಿಕ ಆಸ್ತಿ-ಪಾಸ್ತಿ ಹಾನಿ ಹಾಗೂ ಬೆಳೆ ನಷ್ಟ ಮುಂದುವರಿಯುತ್ತಲೇ ಇದೆ.
ಜಿಲ್ಲೆಯಲ್ಲಿ ಶುಕ್ರವಾರ 75 ಮನೆಗಳ ಮೇಲೆ ಮರ ಉರುಳಿ ಭಾಗಶಃ ಹಾನಿಯಾಗಿದೆ. ಅಲ್ಲದೆ, 7 ಕುಟುಂಬಗಳ ತೋಟಗಾರಿಕಾ ಬೆಳೆ ಹಾಗೂ 16 ಕುಟುಂಬಗಳ ಕೊಟ್ಟಿಗೆಗೆ ಹಾನಿಯಾಗಿದೆ. ಭಾರಿ ಮಳೆ ಹಿನ್ನೆಯಲ್ಲಿ ಹೆಬ್ರಿ ತಾಲೂಕಿನ ಶಾಲಾ-ಕಾಲೇಜುಗಳಿಗೆ ತಾಲೂಕಾಡಳಿತ ಶುಕ್ರವಾರವೂ ರಜೆ ೋಷಿಸಿತ್ತು.
ಅಬ್ಬರಿಸಲಿದೆ ಕಡಲು
ಜುಲೈ 27, 28ರಂದು ಎರಡು ದಿನ ಕರಾವಳಿ ಜಿಲ್ಲೆಯಲ್ಲಿ ಭಾರಿ ಮಳೆಯಾಗಲಿದ್ದು, ಗಂಟೆಗೆ ಕನಿಷ್ಠ 35-45 ಕಿ.ಮೀ. ಹಾಗೂ ಗರಿಷ್ಠ 55 ಕಿ.ಮೀ. ವೇಗದಲ್ಲಿ ಬಿರುಗಾಳಿ ಬೀಸಲಿದೆ. 27ರಂದು ದ.ಕ. ಜಿಲ್ಲೆಯಲ್ಲಿ ಮೂಲ್ಕಿಯಿಂದ ಮಂಗಳೂರುವರೆಗಿನ ಕಡಲಿನಲ್ಲಿ ಅಲೆಗಳು ಅಬ್ಬರಿಸಲಿದ್ದು, 3.1-3.2 ಮೀ. ಎತ್ತರದಲ್ಲಿ ಅಲೆಗಳು ಏಳಲಿವೆ. ಉಡುಪಿ ಜಿಲ್ಲೆಯ ಬೈಂದೂರಿನಿಂದ ಕಾಪುವರೆಗಿನ ಕಡಲಲ್ಲಿ ಅಲೆಗಳು ಅಬ್ಬರಿಸಲಿದ್ದು, 3.4-3.6 ಮೀಟರ್ ಎತ್ತರಕ್ಕೆ ಅಲೆಗಳು ಏಳಲಿವೆ ಎಂದು ಭಾರತೀಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಮಳೆ ಪ್ರಮಾಣ
ಉಡುಪಿ ಜಿಲ್ಲೆಯಲ್ಲಿ ಸರಾಸರಿ 54.09 ಮಿ.ಮೀ. ಮಳೆಯಾಗಿದೆ. ಕಾರ್ಕಳ 50.07, ಕುಂದಾಪುರ 56.01, ಉಡುಪಿ 45.07, ಬೈಂದೂರು 45.09, ಬ್ರಹ್ಮಾವರ 62.03, ಕಾಪು 22.03 ಹಾಗೂ ಹೆಬ್ರಿ ತಾಲೂಕಿನಲ್ಲಿ 87 ಮಿ.ಮೀ. ಮಳೆಯಾಗಿದೆ.