

ಕಾರ್ಕಳ: ಕಾರ್ಕಳ ತಾಲೂಕಾದ್ಯಂತ ಮನೆ ಹಾಗೂ ಕೃಷಿ ನಾಶವಾಗಿವೆ. ಸಾಣೂರು ಗ್ರಾಮದ ಮಲ್ಲಿಕ ಪೂಜಾರಿ ಭತ್ತದ ಗದ್ದೆಗೆ ಹಲಸಿನ ಮರ ಉರುಳಿದೆ. ನಲ್ಲೂರು ಗ್ರಾಮದ ಪರಪ್ಪಾಡಿ ಸರೋಜಿನಿ ಶೆಟ್ಟಿ, ಬಿಚ್ಚನಬೆಟ್ಟಿನ ಅಣ್ಣಿ ಶೆಟ್ಟಿ, ಯೋಗೀಶ್ ರಾವ್, ದೇವಕಿ ಪುಜಾರಿ, ಮುಡಾರು ಗ್ರಾಮದ ಯೋಗೀಶ್ ರಾವ್ ತೋಟದಲ್ಲಿ ಕೃಷಿ ಹಾನಿಯಾಗಿದೆ.
ಗಾಳಿಯ ರಭಸಕ್ಕೆ ನಲ್ಲೂರು ಬಿರಾಲು ಪೇಟೆ ಸರ್ಕಾರಿ ಪ್ರಾಥಮಿಕ ಶಾಲೆಯ ಹೆಂಚು ಹಾಗೂ ಸ್ವಾಗತ ದ್ವಾರ ಹಾರಿಹೋಗಿದೆ. ಸುರಕ್ಷತೆ ದೃಷ್ಟಿಯಿಂದ ವಿದ್ಯಾರ್ಥಿಗಳನ್ನು ಬೇರೆಡೆಗೆ ಸ್ಥಳಾಂತರಿಸಲಾಗಿದೆ. ಮುಳಿಕಾರು ಸರ್ಕಾರಿ ಪ್ರಾಥಮಿಕ ಶಾಲೆಯ ಹಳೆಯ ಅಡುಗೆ ಕೋಣೆಯ ಶೀಟುಗಳೂ ಹಾರಿ ಹೋಗಿವೆ. ಮಿಯ್ಯರು ಗ್ರಾಮದ ಕಜೆ ಎಂಬಲ್ಲಿನ ಶ್ಯಾಂಡ್ಲಿ ಮನೆಗೆ ಮರ ಬಿದ್ದು ಹಾನಿಯಾಗಿದೆ.