ಗ್ರಾಮೀಣ ಕ್ರೀಡೆಯಿಂದ ಬುದ್ಧಿಶಕ್ತಿ ಹೆಚ್ಚಳ : ಅನಿಲ್ ಕುಮಾರ್ ಎಸ್.ಎಸ್. ಅಭಿಮತ

aati

ವಿಜಯವಾಣಿ ಸುದಿಜಾಲ ಬೆಳ್ತಂಗಡಿ

ಕ್ರೀಡಾ ಜೀವನ ಮಾನಸಿಕ ಶಕ್ತಿಯನ್ನು ವೃದ್ಧಿಸುತ್ತದೆ. ಏಕಾಗ್ರತೆ, ಬುದ್ಧಿಮಟ್ಟ ಸದೃಢಗೊಳಿಸುವ ಅಂಶ ಗ್ರಾಮೀಣ ಕ್ರೀಡೆಯಲ್ಲಿದೆ. ಜೀವನ ಶೈಲಿ ಬದಲಾದಂತೆ ಇದನ್ನೆಲ್ಲ ಮರೆಯುತ್ತಿದ್ದೇವೆ. ಹಿಂದಿನ ಜೀವನ ಮತ್ತೆ ಮರುಕಳಿಸುವ ಉದ್ದೇಶವೆ ಏಣೆಲು ಗೊಬ್ಬು ಎಂದು ಶ್ರೀ ಧ.ಗ್ರಾ.ಯೋಜನೆ ಬಿ.ಸಿ.ಟ್ರಸ್ಟ್ ಕೇಂದ್ರ ಕಚೇರಿ ಕಾರ್ಯನಿರ್ವಾಹಕ ನಿರ್ದೇಶಕ ಅನಿಲ್ ಕುಮಾರ್ ಎಸ್.ಎಸ್. ಹೇಳಿದರು.

ಸೋಮವಾರ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬೆಳ್ತಂಗಡಿ, ಲಾಯಿಲ ಪ್ರಗತಿಬಂಧು, ಜ್ಞಾನವಿಕಾಸ, ಸ್ವಸಹಾಯ ಸಂಘಗಳ ಒಕ್ಕೂಟ ಬೆಳ್ತಂಗಡಿ ಮತ್ತು ಲಾಲ ವಲಯ, ಜನಜಾಗೃತಿ ವೇದಿಕೆ, ವಲಯ ಶೌರ್ಯ ವಿಪತ್ತು ನಿರ್ವಹಣಾ ಘಟಕ ಮತ್ತು ವಲಯ ಭಜನಾ ಪರಿಷತ್ ಜಂಟಿ ಆಶ್ರಯದಲ್ಲಿ ಬೆಳ್ತಂಗಡಿ ಶ್ರೀ ಮಂಜುನಾಥ ಆಂಗ್ಲ ಮಾಧ್ಯಮ ಶಾಲಾ ಕ್ರೀಡಾಂಗಣದಲ್ಲಿ ಆಯೋಜಿಸಿದ ಏಣೆಲು ಗೊಬ್ಬು ಉದ್ಘಾಟಿಸಿ ಮಾತನಾಡಿದರು.

ಬೆಳ್ತಂಗಡಿ ಬೆಸ್ಟ್ ಫೌಂಡೇಷನ್ ಅಧ್ಯಕ್ಷ ರಕ್ಷಿತ್ ಶಿವರಾಮ್ ಮಾತನಾಡಿ, ತುಳು ಭಾಷೆಯ ಶ್ರೀಮಂತಿಕೆಯನ್ನು ಸಾಧ್ಯವಾದಲ್ಲೆಲ್ಲ ನಾವು ಬೆಳೆಸಬೇಕು. ಧರ್ಮಸ್ಥಳದ ಪುಣ್ಯಭೂಮಿಯಲ್ಲಿ ಆರಂಭಿಸಿದ ಯೋಜನೆಗಳೆಲ್ಲವೂ ರಾಜ್ಯಮಟ್ಟದಲ್ಲಿ ಇತಿಹಾಸ ಸೃಷ್ಟಿಸಿವೆ. ಮುಂದೆ ಗ್ರಾಮೀಣ ಕ್ರೀಡಾಕೂಟ ಮನೆಮಾತಾಗಲಿ. ತುಳುವನ್ನು ಅಧಿಕೃತ ಭಾಷೆಯಾಗಿಸುವಲ್ಲಿ ನಮ್ಮೆಲ್ಲ ಹೋರಾಟ ಅಗತ್ಯವಾಗಿದ್ದು, ರಾಜ್ಯ ಸರ್ಕಾರ ಇದರೆಡೆ ಇಚ್ಛಾಶಕ್ತಿ ತೋರಿದೆ ಎಂದರು.

ಗಡಿ ಭದ್ರತಾ ಪಡೆ ಸಿಗ್ನಲ್ ರೆಜಿಮೆಂಟ್‌ನ ನಿವೃತ್ತ ಯೋಧ ಗಣೇಶ್ ಬಿ.ಎಲ್. , ವಲಯ ಪ್ರಗತಿ ಬಂಧು ಒಕ್ಕೂಟ ವಲಯ ಅಧ್ಯಕ್ಷ ಬಿ.ಎ.ರಜಾಕ್, ಬೆಳ್ತಂಗಡಿ ವಲಯ ಜನಜಾಗೃತಿ ವೇದಿಕೆ ವಲಯ ಅಧ್ಯಕ್ಷ ಪುರುಷೋತ್ತಮ ಕನ್ನಾಜೆ, ಬೆಳ್ತಂಗಡಿ ಆಂ.ಮಾ.ಶಾಲೆ ಸಹ ಶಿಕ್ಷಕಿ ಪ್ರಮಿಳಾ ಉಪಸ್ಥಿತರಿದ್ದರು.

ಲಾಯಿಲ ಪ್ರಗತಿಪರ ಕೃಷಿಕ ಭೋಜ ಮಲೆಕುಡಿಯ ಏಣೆಲು ಗೊಬ್ಬು ಕೆಸರುಗದ್ದೆ ಕ್ರೀಡಾಕೂಟ ಉದ್ಘಾಟಿಸಿದರು. ಬೆಳ್ತಂಗಡಿ ಪ್ರಗತಿ ಬಂಧು ಸ್ವ.ಸ.ಸಂಘ ಕೇಂದ್ರ ಒಕ್ಕೂಟದ ಅಧ್ಯಕ್ಷ ಸೀತಾರಾಮ್ ಆರ್. ಸ್ವಾಗತಿಸಿದರು. ಸಚಿನ್ ಗೇರುಕಟ್ಟೆ ನಿರೂಪಿಸಿದರು. ಕ್ರೀಡಾಕೂಟವನ್ನು ವಿಜಯ್ ಅತ್ತಾಜೆ ನಡೆಸಿಕೊಟ್ಟರು.

ಮಕ್ಕಳು, ಮಹಿಳೆಯರಿಗೆ, ಪುರುಷರಿಗೆ ಹಗ್ಗ-ಜಗ್ಗಾಟ, ನಿಧಿ ಹುಡುಕುವುದು, ಸಂಧಿ ಪಾಡ್ದನ, ಕಬಡ್ಡಿ, ತ್ರೋಬಾಲ್, ಗೂಟದ ಓಟ ಸಹಿತ ಮುಂತಾದ ಕ್ರೀಡೆಗಳು ನಡೆದವು.

250 ತಾಲೂಕಿನಲ್ಲಿ ಗ್ರಾಮೀಣ ಕ್ರೀಡಾಕೂಟ

ಗ್ರಾಮೀಣ ಕ್ರೀಡಾಕೂಟಗಳಿಗೆ ಮೌಲ್ಯ ಕಟ್ಟಲು ಸಾಧ್ಯವಿಲ್ಲ. ಹಿಂದಿನ ಜೀವನ ಶೈಲಿಯನ್ನು ಮರೆತು ಅರ್ಥವಿಲ್ಲದ ಹಾದಿಯಲ್ಲಿ ನಾವು ಸಾಗುತ್ತಿದ್ದೇವೆ. ಗ್ರಾಮೀಣ ಕ್ರೀಡಾಕೂಟ ಉಳಿಸಿ, ಬೆಳೆಸಿ ಮುಂದಿನ ಪೀಳಿಗೆಗೆ ತಿಳಿಸಿ ಆಕರ್ಷಿತರಾಗುವಂತೆ ಮಾಡಬೇಕು. ಈ ನೆಲೆಯಲ್ಲಿ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆಯವರು, ಹೇಮಾವತಿ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ರಾಜ್ಯದ 250 ತಾಲೂಕಿನಲ್ಲಿ ಗ್ರಾಮೀಣ ಕ್ರೀಡಾಕೂಟ ಸಂಘಟಿಸಲಾಗುತ್ತಿದೆ ಎಂದು ಅನಿಲ್ ಕುಮಾರ್ ಎಸ್.ಎಸ್. ತಿಳಿಸಿದರು.

Share This Article

ನಿಮ್ಮ ಅಂಗೈನಲ್ಲಿ ಈ ಚಿಹ್ನೆ ಇದೆಯಾ ನೋಡಿ… ಇದ್ರೆ ಎಂದಿಗೂ ಹಣಕಾಸಿನ ಸಮಸ್ಯೆಗಳು ಎದುರಾಗಲ್ಲ | Palmistry

ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…

Honey: ಜೇನಿನೊಂದಿಗೆ ಈ ಆರು ಆಹಾರ ಬೆರೆಸಿ ತಿನ್ನಬೇಡಿ..ಹಾಗೆ ಮಾಡಿದರೆ ವಿಷವಾಗುತ್ತದೆ!

ಜೇನು(Honey) ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಆದರೆ ಕೆಲವು ಪದಾರ್ಥಗಳೊಂದಿಗೆ ಬೆರೆಸಿ ಸೇವಿಸಬಾರದು. ಈ 6 ಪದಾರ್ಥಗಳೊಂದಿಗೆ…

ಅಕ್ಕಿ ತೊಳೆದ ನೀರನ್ನು ಚೆಲ್ಲಬೇಡಿ.. ಈ ನೀರಿನಿಂದ ದೇಹದ ತೂಕ ಇಳಿಸಿಕೊಳ್ಳಬಹುದು! Interesting information

ಬೆಂಗಳೂರು:  ಅಕ್ಕಿ ತೊಳೆದರೆ ಬರುವ ನೀರನ್ನು ( rice washed water) ಅನೇಕರು ಬಿಸಾಡುತ್ತಾರೆ. ಆದರೆ…