

ಬೆಳ್ತಂಗಡಿ: ಎಸ್ಡಿಎಂ ಶಿಕ್ಷಣ ಸಂಸ್ಥೆಗಳ ಶಾಲಾ ಬಸ್ ಚಾಲಕರಿಗೆ ಎಸ್.ಡಿ.ಎಂ ಎಜುಕೇಶನಲ್ ಸೊಸೈಟಿಯಿಂದ ಸ್ಟೇರಿಂಗ್ ಟುವರ್ಡ್ಸ್ ಸೇಫ್ಟಿ ಕಾರ್ಯಾಗಾರ ನಡೆಯಿತು.
ಬೆಳ್ತಂಗಡಿಯ ಸಂಚಾರ ಪೊಲೀಸ್ ಹಾಗೂ ಪಿಎಸ್ಐ ಅರ್ಜುನ್ ಎಚ್.ಕೆ. ಕಾರ್ಯಕ್ರಮ ಉದ್ಘಾಟಿಸಿದರು.
ಸಂಪನ್ಮೂಲ ವ್ಯಕ್ತಿ ಮಂಗಳೂರಿನ ಸಾರಿಗೆ ಇಲಾಖೆ, ಭಾರಿ ವಾಹನ ಚಾಲಕರ ತರಬೇತಿ ಸಂಸ್ಥೆ ತರಬೇತುದಾರ ಭುಜಂಗ ಶೆಟ್ಟಿ ಅವರು ದೃಶ್ಯ ಮಾಧ್ಯಮದ ಪ್ರಾತ್ಯಕ್ಷಿಕೆಯೊಂದಿಗೆ ಮಾಹಿತಿ ನೀಡಿದರು. ಎಸ್ಡಿಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ.ಸತೀಶ್ಚಂದ್ರ ಎಸ್. ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕಿ ಕಲ್ಯಾಣಿ ರಾವ್ ನಿರೂಪಿಸಿದರು. ಎಸ್ಡಿಎಂ (ಸಿಬಿಎಸ್ಇ) ಶಾಲೆ ಪ್ರಾಂಶುಪಾಲ ಮನ್ಮೋಹನ್ ನಾಯ್ಕ ಕೆ.ಜಿ. ಸ್ವಾಗತಿಸಿದರು.