

ಇತ್ತೀಚೆಗೆ ಹಾವು ಮತ್ತು ಚೇಳುಗಳ ನಡುವಿನ ಕಿತ್ತಾಟದ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಅದೇ ರೀತಿಯ ಮತ್ತೊಂದು ವಿಡಿಯೋ ಸದ್ಯ ಜಾಲತಾಣದಲ್ಲಿ ಟ್ರೆಂಡ್ ಆಗಿದ್ದು, ನೋಡುಗರ ಗಮನ ಸೆಳೆಯುತ್ತಿದೆ. (Viral Video)
ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಒಂದು ಚಿಕ್ಕ ಗೂಡಿನಲ್ಲಿ ಹಾವಿದೆ. ಬಳಿಕ ಅಲ್ಲಿಗೆ ಚೇಳು ಬರುವುದನ್ನು ನೋಡಬಹುದಾಗಿದೆ. ಚೇಳು ಬರುವುದನ್ನು ಕಂಡು ಹಾವು ಎಚ್ಚೆತ್ತುಕೊಳ್ಳುವುದನ್ನು ನಾವು ಕಾಣಬಹುದಾಗಿದೆ. ಚೇಳು ಎತ್ತರದಲ್ಲಿ ಹಾವಿಗಿಂತ ಚಿಕ್ಕದಾಗಿದ್ದರೂ ಕುಟುಕುವ ವಿಷಯದಲ್ಲಿ ಅದಕ್ಕೆ ಸಾಟಿಯೇ ಇಲ್ಲ ಎನ್ನಲಾಗುತ್ತದೆ. ಈ ವೈರಲ್ ವಿಡಿಯೋವನ್ನು ನೋಡಿದರೆ ಹಾವು ಚೇಳಿಗೆ ಹೆದರುತ್ತಿದೆ ಎಂದು ಅನ್ನಿಸುವುದಂತೂ ಸುಳ್ಳಲ್ಲ.
ಸುಮಾರು 5 ಸೆಕೆಂಡ್ ಇರುವ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಬಳಿಕ ಇದುವರೆಗೂ 11 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. ಮತ್ತು 1.5 ಲಕ್ಷಕ್ಕೂ ಹೆಚ್ಚು ಮಂದಿ ಲೈಕ್ ಮಾಡಿದ್ದಾರೆ. ನೂರಾರು ಜನರು ಪ್ರತಿಕ್ರಿಯಿಸಿದ್ದಾರೆ.
ಇಬ್ಬರ ನಡುವೆ ಜಗಳ ನಡೆದಿದ್ದರೆ ಚೇಳು ಮಾತ್ರ ಗೆಲ್ಲುತ್ತಿತ್ತು ಎಂದು ಕೆಲವರು ಹೇಳಿದ್ದಾರೆ. ಒಂದೇ ಚೌಕಟ್ಟಿನಲ್ಲಿ 2 ದಂತಕಥೆಗಳು, ಎರಡು ತುಂಬಾ ಅಪಾಯಕಾರಿ ಪ್ರಾಣಿಗಳು, ಹಾವು ಮತ್ತು ಚೇಳಿನ ಕಾದಾಟ ನೋಡಲು ನಿಜವಾಗಿಯೂ ಆಸಕ್ತಿದಾಯಕವಾಗಿದೆ, ಈ ಕ್ಲಿಪ್ನ ಮುಂದಿನ ಭಾಗ ಬರುತ್ತದೆಯೇ ಎಂದು ಕಾಮೆಂಟ್ ಮಾಡಿದ್ದಾರೆ. (ಏಜೆನ್ಸೀಸ್)