

ಪಡುಬಿದ್ರಿ: ಅಪಘಾತಕ್ಕೀಡಾಗಿ ಜಖಂಗೊಂಡಿದ್ದ ಪಾಂಗಾಳದ ಪ್ರಕಾಶ್ ಎಸ್.ಎಂಬುವರ ಸ್ಕೂಟರನ್ನು ಕಳವು ಮಾಡಿರುವ ಘಟನೆ ನಡೆದಿದೆ. ರಾಷ್ಟ್ರೀಯ ಹೆದ್ದಾರಿ 66ರ ಪಾಂಗಾಳದಲ್ಲಿ ಏ.6ರಂದು ಬೈಕ್ ಡಿಕ್ಕಿಯಾಗಿ ಸ್ಕೂಟರ್ ಸವಾರ ಪ್ರಕಾಶ್ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು. ಜಖಂಗೊಂಡ ಸ್ಕೂಟರನ್ನು ಸಮೀಪದ ಮನೆಯೊಂದರ ಎದುರಿನಲ್ಲಿ ನಿಲ್ಲಿಸಲಾಗಿತ್ತು. ಏ.7 ಮತ್ತು 8ರ ಮಧ್ಯದ ಅವಧಿಯಲ್ಲಿ ಸ್ಕೂಟರ್ ಕಳವಾಗಿರುವುದಾಗಿ ಪ್ರಕಾಶ್ ಪತ್ನಿ ಮಲ್ಲಿಕಾ ಕಾಪು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.