

India: ಚೀನಾದ ಟಿಯಾಂಜಿನ್‌ನಲ್ಲಿ ನಡೆದ ಶಾಂಘೈ ಸಹಕಾರ ಸಂಸ್ಥೆ (SCO) ಶೃಂಗಸಭೆಯಲ್ಲಿ ಭಾರತ ಪ್ರಮುಖ ರಾಜತಾಂತ್ರಿಕ ಯಶಸ್ಸನ್ನು ಸಾಧಿಸಿದ್ದು, ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯನ್ನು SCO ಸದಸ್ಯ ರಾಷ್ಟ್ರಗಳು ತೀವ್ರವಾಗಿ ಖಂಡಿಸಿವೆ.
ಈ ಬಗ್ಗೆ ಘೋಷಣೆ ಮಾಡಿರುವ SCO ಸದಸ್ಯ ರಾಷ್ಟ್ರಗಳು, ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ ಮೃತಪಟ್ಟಿದ್ದ ಕುಟುಂಬಗಳಿಗೆ ಸಂತಾಪ ಸೂಚಿಸಿದವು. ಅಲ್ಲದೆ, ಇಂತಹ ಕೃತ್ಯ ಮಾಡಿದ ಅಪರಾಧಿಗಳು, ಸಂಘಟನೆ ಮತ್ತು ಪ್ಲಾನ್ ಮಾಡಿದ ವ್ಯಕ್ತಿಗಳನ್ನು ಹೊಣೆಗಾರರನ್ನಾಗಿ ಮಾಡಬೇಕು ಎಂದು ಒತ್ತಾಯಿಸಿದವು. ಈ ಸಭೆಯ ಘೋಷಣೆಯು ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯ ಎಂಬ ಮಂತ್ರವು ಸಹ ಪ್ರತಿಧ್ವನಿಸಿತು.
ಭಯೋತ್ಪಾದನೆ, ಪ್ರತ್ಯೇಕತಾವಾದ ಮತ್ತು ಉಗ್ರವಾದವನ್ನು ಎದುರಿಸಲು ತಮ್ಮ ಬದ್ಧತೆಯನ್ನು ಪುನರ್ ಉಚ್ಚರಿಸಿದ ಸದಸ್ಯ ರಾಷ್ಟ್ರಗಳು ಯಾವುದೇ ಗುಂಪನ್ನು ರಾಜಕೀಯ ಉದ್ದೇಶಗಳಿಗಾಗಿ ಬಳಸಬಾರದು ಎಂದು ತಿಳಿಸಿದವು. ಭಯೋತ್ಪಾದನೆ ಮತ್ತು ಉಗ್ರವಾದದ ಬೆದರಿಕೆಗಳನ್ನು ಎದುರಿಸುವಲ್ಲಿ ಸಾರ್ವಭೌಮ ರಾಷ್ಟ್ರಗಳು ಮತ್ತು ಏಜೆನ್ಸಿಗಳ ಕೇಂದ್ರ ಪಾತ್ರವನ್ನು ಮುಖ್ಯವಾಗಿದ್ದು, ಈ ಸವಾಲುಗಳ ವಿರುದ್ಧ ಒಗ್ಗಟ್ಟಿನ ಕೆಲಸ ಮಾಡಬೇಕು ಎಂದು ತಿಳಿಸಿದವು.
ಚೀನಾದ ಟಿಯಾಂಜಿನ್ ನಡೆದ SCO ಶೃಂಗಸಭೆಯ ಘೋಷಣೆಯು ಯುಎನ್ ಚಾರ್ಟರ್ ಮತ್ತು ಅಂತರರಾಷ್ಟ್ರೀಯ ವ್ಯಾಪಾರ ತತ್ವಗಳನ್ನು ಉಲ್ಲಂಘಿಸುವ ಆರ್ಥಿಕ ನಿರ್ಬಂಧಗಳು ಸೇರಿದಂತೆ ಏಕಪಕ್ಷೀಯ ಕ್ರಮಗಳನ್ನು ವಿರೋಧಿಸಿತು. ಅಲ್ಲದೆ, ಸದಸ್ಯ ರಾಷ್ಟ್ರಗಳು ಇಂತಹ ಕ್ರಮಗಳು ಅಂತರರಾಷ್ಟ್ರೀಯ ಭದ್ರತೆಗೆ ಹಾನಿ ಮಾಡುತ್ತವೆ. ಆಹಾರ ಮತ್ತು ಇಂಧನ ಪೂರೈಕೆಗೆ ಅಡ್ಡಿಪಡಿಸುತ್ತವೆ, ನ್ಯಾಯಯುತ ಸ್ಪರ್ಧೆಯನ್ನು ದುರ್ಬಲಗೊಳಿಸುತ್ತವೆ ಮತ್ತು ಯುಎನ್ ಸುಸ್ಥಿರ ಅಭಿವೃದ್ಧಿ ಗುರಿಗಳತ್ತ ಪ್ರಗತಿ ಸೇರಿದಂತೆ ಜಾಗತಿಕ ಸಹಕಾರವನ್ನು ತಡೆಯುತ್ತವೆ ಎಂದು ಎಚ್ಚರಿಸಿದವು.
ಎಸ್‌ಸಿಒ ಕುರಿತ ಭಾರತದ ದೃಷ್ಟಿಕೋನವು ಭದ್ರತೆ, ಸಂಪರ್ಕ ಮತ್ತು ಅವಕಾಶ ಎಂಬ ಮೂರು ಪ್ರಮುಖ ಮಂತ್ರಗಳಿಂದ ಮಾರ್ಗದರ್ಶಿಸಲ್ಪಟ್ಟಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ದೇಶಗಳ ಬೆಳವಣಿಗೆಗೆ ಭದ್ರತೆ, ಶಾಂತಿ ಮತ್ತು ಸ್ಥಿರತೆಯ ಮಹತ್ವ, ಅಫ್ಘಾನಿಸ್ತಾನ ಮತ್ತು ಮಧ್ಯ ಏಷ್ಯಾಕ್ಕೆ ಭಾರತದ ಸಂಪರ್ಕ ಪ್ರಯತ್ನಗಳನ್ನು ಮೋದಿ ಎಸ್ಇಒ ಗಮನಕ್ಕೆ ತಂದರು. ಎಸ್‌ಸಿಒ ಸದಸ್ಯ ರಾಷ್ಟ್ರಗಳ ಸಾಂಸ್ಕೃತಿಕ ಅಂಶಗಳನ್ನು ಜಗತ್ತಿಗೆ ತರಲು ನಾಗರಿಕ ಸಂವಾದದ ವೇದಿಕೆಯನ್ನು ರಚಿಸುವಂತೆ ಸೂಚಿಸಿದರು.(ಏಜೆನ್ಸೀಸ್)