ಕೊಕ್ಕರ್ಣೆ: ದ.ಕ. ಮತ್ತು ಉಡುಪಿ ಜಿಲ್ಲೆ ಅತಿ ಹೆಚ್ಚು ಬಿಸಿಲು ಮತ್ತು ಮಳೆ ಬೀಳುವ ಪ್ರದೇಶವಾದ್ದರಿಂದ ಹೈನುಗಾರಿಕೆ ಕಷ್ಟದಾಯಕ. ಆದರೆ ವೈಜ್ಞಾನಿಕ ರೀತಿಯಲ್ಲಿ ಹಸುಗಳನ್ನು ಸಾಕುವುದರಿಂದ ಜಾನುವಾರುಗಳಿಗೆ ಬರುವ ರೋಗಗಳಿಂದ ರಕ್ಷಿಸಬಹುದು. ಕಾಲಕಾಲಕ್ಕೆ ಹಸುಗಳಿಗೆ ಲಸಿಕೆ, ಮಿನರಲ್ ಮಿಕ್ಸರ್ ನೀಡುವುದರಿಂದ ಹಾಲಿನ ಗುಣಮಟ್ಟ ಹೆಚ್ಚಿಸಬಹುದು ಎಂದು ದ.ಕ. ಹಾಲು ಒಕ್ಕೂಟ ವೈದ್ಯಾಧಿಕಾರಿ ಡಾ.ನಿಜಂ ಪಾಟೀಲ್ ಗಣಿಹಾರ್ ಹೇಳಿದರು. ಕಾಡೂರು ಹಾಲು ಉತ್ಪಾದಕರ ಸಹಕಾರಿ ಸಂಘದ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿದರು.
ಒಕ್ಕೂಟ ವಿಸ್ತರಣಾಧಿಕಾರಿ ಪ್ರತಿಭಾ ಮಾತನಾಡಿ, ಒಕ್ಕೂಟದಿಂದ ದೊರೆಯುವ ಸವಲತ್ತು ಬಳಸಿಕೊಂಡು ಉತ್ತಮ ಲಾಭ ಪಡೆಯಬಹುದು ಎಂದರಲ್ಲದೆ, ಹಸುಗಳಿಗೆ ವಿಮೆ, ಗೋಬರ್ ಗ್ಯಾಸ್ ರಚನೆ, ಮ್ಯಾಟ್, ಸ್ಲರಿ, ಮಿನಿ ಡೈರಿ ಯೋಜನೆ ಮುಂತಾದ ವಿಷಯಗಳ ಕುರಿತು ಮಾಹಿತಿ ನೀಡಿದರು.
ಸಂಘದ ಅಧ್ಯಕ್ಷ ಸುರೇಶ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಶಶಿಧರ ಶೆಟ್ಟಿ, ನಿರ್ದೇಶಕರಾದ ಸತ್ಯನಾರಾಯಣ ಶೆಟ್ಟಿ, ಸಂದೇಶ, ಗೋವಿಂದ ಸೂಡ, ಸುಧಾಕರ ಕುಂದರ್, ವಿಜಯ ಮರಕಾಲ, ರಘುರಾಮ ಶೆಟ್ಟಿ, ಅಕ್ಷತಾ, ವಿಶಾಲಾಕ್ಷಿ ಶೆಡ್ತಿ, ಚಂದ್ರ, ಕೃಷ್ಣ ಎಂ., ಕೃಷ್ಣ ಪೂಜಾರಿ, ಸದಸ್ಯರು, ಹೈನುಗಾರರು, ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.
ಸಂಘದ ನಿರ್ದೇಶಕ ಸತ್ಯನಾರಾಯಣ ಶೆಟ್ಟಿ ಸ್ವಾಗತಿಸಿ, ಮುಖ್ಯಕಾರ್ಯನಿರ್ವಹಣಾಧಿಕಾರಿ ಮೋಹನ ನಾಯ್ಕ ವರದಿ ವಾಚಿಸಿ, *ಹಾಲುಪೃಇಕ್ಷಕಿ ಸವಿತಾ ವಂದಿಸಿದರು. ಗಣಕ ಯಂತ್ರ ನಿರ್ವಾಹಕಿ ವನಿತಾ ಸಹಕರಿಸಿದರು.
ಗೌರವ
ಅತಿ ಹೆಚ್ಚು ಅಂಕಗಳಿಸಿದ ಸಂಘದ ಸದಸ್ಯರ ಮಕ್ಕಳಿಗೆ ವಿದ್ಯಾರ್ಥಿವೇತನ, ಅತಿ ಹೆಚ್ಚು ಹಾಲು ನೀಡಿದ ಹೈನುಗಾರರಿಗೆ ಪ್ರೋತ್ಸಾಹಕ ಬಹುಮಾನ ನೀಡಿ ಗೌರವಿಸಲಾಯಿತು. ಸಂಘ ವರದಿ ವರ್ಷದಲ್ಲಿ 1,13,997 ರೂ.ಲಾಭ ಗಳಿಸಿದ್ದು, ಎ ಶ್ರೇಣಿ ಮಾನ್ಯತೆ ಹೊಂದಿದೆ.