ಕೊಕ್ಕರ್ಣೆ: ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡು ಹೆಚ್ಚು ಹೆಚ್ಚು ಹಾಲು ಸಂಘಕ್ಕೆ ನೀಡಿ ಸಂಘವನ್ನು ಅಭಿವೃದ್ಧಿಗೊಳಿಸಿ ಎಂದು ಸಂಘದ ಅಧ್ಯಕ್ಷ ರತ್ನಾಕರ ಶೆಟ್ಟಿ ಹೇಳಿದರು.
ಕನ್ನಾರು ಹಾಲು ಉತ್ಪಾದಕರ ಸಹಕಾರಿ ಸಂಘ 2023-24ನೇ ಸಾಲಿನ ಸರ್ವ ಸದಸ್ಯರ ಸಾಮಾನ್ಯ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ದ.ಕ. ಹಾಲು ಒಕ್ಕೂಟ ವಿಸ್ತರಣಾಧಿಕಾರಿ ಮಂಜುನಾಥ್, ಒಕ್ಕೂಟದಿಂದ ದೊರಕುವ ವಿವಿಧ ಯೋಜನೆ ಉಪಯೋಗಿಸಿ, ಸಂಘಕ್ಕೆ ಗುಣಮಟ್ಟದ ಹಾಲು ನೀಡುವಂತೆ ತಿಳಿಸಿದರು. ಮಿಶ್ರತಳಿ ಕರುಸಾಕಣೆ, ಪಶುವಿಮೆ, ಎಎಂಸಿಎಸ್ ಹಾಲು ಶೇಖರಣೆ ಕುರಿತು ಮಾಹಿತಿ ನೀಡಿದರು. ಸಂಘದ ಉಪಾಧ್ಯಕ್ಷ ಆನಂದ ನಾಯ್ಕ, ನಿರ್ದೇಶಕರಾದ ಕುಮಾರ ಕುಲಾಲ, ನಾರಾಯಣ ಕುಲಾಲ, ರಾಮಣ್ಣ ಶೆಟ್ಟಿ, ಸುರೇಶ್ ಶೆಟ್ಟಿ, ಕೃಷ್ಣಯ್ಯ ಆಚಾರ್ಯ, ಜಯಪ್ರಕಾಶ್, ವಿಠಲ ಮರಕಾಲ, ಪೂರ್ಣಿಮಾ ಭಟ್, ಜೆನೆಟ್ ಡಿ.ಅಲ್ಮೇಡಾ, ವನಜಾ ಮರಕಾಲ್ತಿ, ಸಿಬ್ಬಂದಿ ವರ್ಗ, ಹೈನುಗಾರರು ಉಪಸ್ಥಿತರಿದ್ದರು. ಸಿಬ್ಬಂದಿ ರಂಜನಿ ಸ್ವಾಗತಿಸಿದರು. ಕಾರ್ಯದರ್ಶಿ ವಿಕ್ಟರ್‌ರಾಜ್ ಡಿ.ಅಲ್ಮೇಡಾ ವರದಿ ವಾಚಿಸಿ, ಕೃಷ್ಣಯ್ಯ ಆಚಾರ್ಯ ವಂದಿಸಿದರು.
ಬಹುಮಾನ ವಿತರಣೆ
2023-24ನೇ ಸಾಲಿನಲ್ಲಿ 7ನೇ ತರಗತಿಯಲ್ಲಿ ಅತೀ ಹೆಚ್ಚು ಅಂಕಗಳಿಸಿದ 3 ವಿದ್ಯಾರ್ಥಿಗಳು, 10ನೇ ತರಗತಿಯಲ್ಲಿ ಅತೀ ಹೆಚ್ಚು ಅಂಕಗಳಿಸಿದ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಸಂಘಕ್ಕೆ ಅತಿ ಹೆಚ್ಚು ಹಾಲು ನೀಡಿದ ಜಯಪ್ರಕಾಶ್, ನಾರಾಯಣ ಕುಲಾಲ್, ಸುಧಾಕರ ಕುಲಾಲ್ ಇವರಿಗೆ ಬಹುಮಾನ, ಸದಸ್ಯ ಪ್ರೋತ್ಸಾಹಕ ಬಹುಮಾನ ನೀಡಲಾಯಿತು.