ಮೂಲಸೌಕರ್ಯಗಳಿಗೆ ದಾನಿಗಳ ಸಹಕಾರ

shilanyasa
ತುರ್ತು ಚಿಕಿತ್ಸಾ ಕೊಠಡಿ ಕಟ್ಟಡಗಳಿಗೆ ಶಾಸಕ ಕಿರಣ್ ಕುಮಾರ್ ಕೊಡ್ಗಿ ಶಿಲಾನ್ಯಾಸ ನೆರವೇರಿಸಿದರು.
Published on

ಕೋಟ: ಸ್ಥಳೀಯ ಮೂಲಸೌಕರ್ಯಗಳಿಗೆ ದಾನಿಗಳ ಸಹಕಾರ ಅಗತ್ಯ ಎಂದು ಶಾಸಕ ಕಿರಣ್ ಕುಮಾರ್ ಕೊಡ್ಗಿ ಹೇಳಿದರು.

ಸಾಸ್ತಾನದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಅಮೆರಿಕೆರ್ಸ್ ಇಂಡಿಯಾ ಫೌಂಡೇಶನ್ ಸಂಸ್ಥೆ ಪ್ರಾಯೋಜಕತ್ವದಲ್ಲಿ ನಿರ್ಮಾಣಗೊಳ್ಳುವ ವಿವಿಧ ವಾರ್ಡ್, ತುರ್ತು ಚಿಕಿತ್ಸಾ ಕೊಠಡಿ ಕಟ್ಟಡಗಳಿಗೆ ಗುರುವಾರ ನೆರವೇರಿಸಿ ಮಾತನಾಡಿದರು.

ಪಾಂಡೇಶ್ವರ ಗ್ರಾಪಂ ಅಧ್ಯಕ್ಷೆ ಸುಶೀಲ ಪೂಜಾರಿ, ಉಪಾಧ್ಯಕ್ಷ ವೈ.ಬಿ.ರಾಘವೇಂದ್ರ, ಸದಸ್ಯರಾದ ಸುಜಾತ ವೆಂಕಟೇಶ ಪೂಜಾರಿ, ಸಂಧ್ಯಾ ರಾವ್, ಐರೋಡಿ ಗ್ರಾಪಂ ಸದಸ್ಯ ನವೀನ್ ಕಾರಂತ್, ಸುಬ್ರಹ್ಮಣ್ಯ ಆಚಾರ್, ಗುತ್ತಿಗೆದಾರ ನಾಗರಾಜ್ ಪೈ, ಮಾಜಿ ತಾಪಂ ಅಧ್ಯಕ್ಷೆ ಜ್ಯೋತಿ ಉದಯ್ ಪೂಜಾರಿ, ಸಾಸ್ತಾನ ಸಿಎ ಬ್ಯಾಂಕ್ ನಿರ್ದೇಶಕ ರಮೇಶ್ ಕಾರಂತ್, ಆರೋಗ್ಯ ರಕ್ಷಾ ಸಮಿತಿ ಸದಸ್ಯ ಐರೋಡಿ ವಿಠ್ಠಲ್ ಪೂಜಾರಿ, ದಾನಿಗಳಾದ ನಾಗರಾಜ್ ಕಾರಂತ್, ಆರೋಗ್ಯ ಇಲಾಖೆ ರಾಮ ರಾವ್, ಲತಾ ನಾಯಕ್, ಉಡುಪಿ ಟಿಎಚ್‌ಒ ಡಾ.ವಾಸುದೇವ್, ಸ್ಥಳೀಯರಾದ ಸುರೇಶ್ ಕುಂದರ್, ಸುರೇಶ್ ಪೂಜಾರಿ ಪಾಂಡೇಶ್ವರ, ಶಂಕರ್ ಕುಲಾಲ್ ಉಪಸ್ಥಿತರಿದ್ದರು. ಅಮೆರಿಕೆರ್ಸ್ ಇಂಡಿಯಾ ಫೌಂಡೇಶನ್ ಸಂಸ್ಥೆ ಸಮನ್ವಯ ವಿಭಾಗದ ನವೀನ್ ಪ್ರಸ್ತಾವನೆ ಸಲ್ಲಿಸಿದರು. ಮುಖ್ಯ ವೈದ್ಯಾಧಿಕಾರಿ ಡಾ.ರಾಘವೇಂದ್ರ ರಾವ್ ನಿರೂಪಿಸಿದರು. ಶೀಲಾ ಮ್ಯಾಥ್ಯೂ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net