ಬೈಂದೂರು: ಧರ್ಮ ಜೀವನದ ಒಂದು ಭಾಗ. ನಾವು ಹಂತ ಹಂತವಾಗಿ ಬೆಳಸುವುದನ್ನು ಕಲಿಸುವ ಪಾಠ. ಸಮಾಜದಲ್ಲಿ ಇದನ್ನು ಬೇರೆ ಭಾವನೆಗಳಿಂದ ನೋಡುತ್ತಿದ್ದಾರೆ. ಧರ್ಮದ ಮೇಲಿನ ಶೃದ್ಧೆ ಕಡಿಮೆ ಮಾಡುವ ವ್ಯವಸ್ಥಿತ ಸಂಚು ತೆರೆಮರೆಯಲ್ಲಿ ನಡೆಯುತ್ತಿದೆ ಎಂದು ಕುಂದಾಪುರ ಸೇವಾ ಸಂಗಮ ಟ್ರಸ್ಟ್ ವಿಶ್ವಸ್ಥ ರಿಷಿರಾಜ್ ಸಾಸ್ತಾನ ಹೇಳಿದರು.
ಸೇವಾ ಸಂಗಮ ಶಿಶುಮಂದಿರ ಆಶ್ರಯದಲ್ಲಿ ಶಿಶು ಮಂದಿರದ ಮಕ್ಕಳಿಂದ 40ನೇ ವರ್ಷದ ಮುದ್ದು ರಾಧಾ-ಕೃಷ್ಣ ವೇಷಗಳ ಪ್ರದರ್ಶನ ಉದ್ಘಾಟಿಸಿ ಮಾತನಾಡಿದರು.
ಸೇವಾ ಸಂಗಮ ಅಧ್ಯಕ್ಷ ಮಂಜುನಾಥ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಬೈಂದೂರು ರಾಮಕ್ಷತ್ರಿಯ ಸಮಾಜ ಅಧ್ಯಕ್ಷ ರಾಮಕೃಷ್ಣ ಸಿ. ಶುಭಹಾರೈಸಿದರು. ಸೇವಾ ಸಂಗಮ ಉಪಾಧ್ಯಕ್ಷ ರವೀಂದ್ರ ಶ್ಯಾನುಭಾಗ್, ವ್ಯವಸ್ಥಾಪಕ ದಿನೇಶ್ ಪಡುವರಿ ಉಪಸ್ಥಿತರಿದ್ದರು. ಆಶಾ ದಿನೇಶ್ ಸ್ವಾಗತಿಸಿದರು. ಉಪಾಧ್ಯಕ್ಷ ಸುಧಾಕರ ಪಿ. ನಿರೂಪಿಸಿದರು. ಆಶಾ ಕಿಶೋರ್ ವಂದಿಸಿದರು.