ಮಕ್ಕಳನ್ನು ಯಮನ ಬಾಯಿಗೆ ತಳ್ಳಬೇಡಿ: ಸಿದ್ದರಾಮಯ್ಯ

siddaramayya
siddaramayya
Published on

ಬೆಂಗಳೂರು: ಕರೊನಾ ಹಾವಳಿ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸದ್ಯಕ್ಕೆ ರಾಜ್ಯದಲ್ಲಿ ಶಾಲೆಗಳನ್ನು ಆರಂಭಿಸುವ ಯಾವುದೇ ದುಸ್ಸಾಹಸವನ್ನು ರಾಜ್ಯ ಸರ್ಕಾರ ಮಾಡಬಾರದು ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಆಗ್ರಹಿಸಿದ್ದಾರೆ.

‘‘ಈ ಹಂತದಲ್ಲಿ ಶಾಲೆ ಆರಂಭಿಸುವುದು ಎಂದರೆ ಮಕ್ಕಳನ್ನು ಯಮನ ಬಾಯಿಗೆ ತಳ್ಳಿದಂತೆಯೇ. ಅಂತಹ ದುಷ್ಟ ಕೆಲಸವನ್ನು ಯಾರೂ ಮಾಡಬಾರದು. ಕರೊನಾ ನಿಯಂತ್ರಣಕ್ಕೆ ಬರುವ ತನಕ ಶಾಲೆ ಆರಂಭಿಸಬೇಡಿ’’ ಎಂದು ಅವರು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್‌ಕುಮಾರ್ ಅವರಿಗೆ ಬರೆದಿರುವ ಪತ್ರದಲ್ಲಿ ಒತ್ತಾಯಿಸಿದ್ದಾರೆ.

‘‘ಮಾಸ್ಕ್ ಹಾಕಿಕೊಳ್ಳುವಲ್ಲಿ, ವೈಯಕ್ತಿಕ ಅಂತರ ಕಾಪಾಡಿಕೊಳ್ಳುವಲ್ಲಿ ವಯಸ್ಕರೇ ವಿಫಲರಾಗುತ್ತಿದ್ದಾರೆ. ಇಂತಹುದರಲ್ಲಿ ಈ ಮುನ್ನೆಚ್ಚರಿಕೆಗಳನ್ನು ಮಕ್ಕಳು ಪಾಲಿಸಲಿ ಅಂತ ನಿರೀಕ್ಷಿಸುವುದು ಎಷ್ಟು ಸರಿ’’ ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net