

ಕಾಸರಗೋಡು: ವಿದ್ಯಾರ್ಥಿಗಳ ಸುಪ್ತ ಪ್ರತಿಭೆ ಅನಾವರಣಕ್ಕೆ ಕಲೋತ್ಸವಗಳು ಸಹಕಾರಿ. ಸತತ ಪರಿಶ್ರಮದಿಂದ ಕಲೆ ಸೇರಿದಂತೆ ಶಿಕ್ಷಣದಲ್ಲಿ ಯಶಸ್ಸು ಪಡೆಯಲು ಸಾಧ್ಯ ಎಂದು ಬಿಪಿಪಿಎಎಲ್‌ಪಿ ಶಾಲಾ ಮುಖ್ಯಶಿಕ್ಷಕ, ರಂಗಭೂಮಿ ಕಲಾವಿದ ಸದಾಶಿವ ಬಾಲಮಿತ್ರ ಹೇಳಿದರು.
ಕೊಡ್ಲಮೊಗರು ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಶಾಲಾಮಟ್ಟದ ಕಲೋತ್ಸವ ಉದ್ಘಾಟಿಸಿ ಮಾತನಾಡಿದರು.
ಶಾಲಾ ರಕ್ಷಕ-ಶಿಕ್ಷಕ ಸಂಘ ಉಪಾಧ್ಯಕ್ಷ ಮೋಹನ ಬಿ.ಮತ್ತು ಮಾತೃ ಸಂಘ ಅಧ್ಯಕ್ಷೆ ರಿಯಾನಾ ಭಾಗವಹಿಸಿದ್ದರು. ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಅಬ್ದುಲ್ ಮಜೀದ್ ಅಧ್ಯಕ್ಷತೆ ವಹಿಸಿದ್ದರು. ಸದಾಶಿವ ಬಾಲಮಿತ್ರ ಅವರನ್ನು ಸನ್ಮಾನಿಸಲಾಯಿತು. ಅಧ್ಯಾಪಕಿ ಪೂರ್ಣಿಮಾ ಸನ್ಮಾನ ಪತ್ರ ವಾಚಿಸಿದರು. ಕ್ಲಬ್ ಚಟುವಟಿಕೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಹೈಯರ್ ಸೆಕೆಂಡರಿ ವಿಭಾಗದ ಪ್ರಾಂಶುಪಾಲ ವಿಜಯ ಕುಮಾರ್ ಸ್ವಾಗತಿಸಿ. ಶಿಕ್ಷಕಿ ಸ್ವಾತಿ, ಆರತಿ, ವಿದ್ಯಾರ್ಥಿನಿ ನಿಶ್ಮಿತಾ ನಿರೂಪಿಸಿ. ಮುಖ್ಯಶಿಕ್ಷಕಿ ಕೃಷ್ಣವೇಣಿ ಬಿ. ವಂದಿಸಿದರು.