ಶಾಲಾ ಕಲೋತ್ಸವ ಸ್ವಾಗತ ಸಮಿತಿ ಸಭೆ : ನವೆಂಬರ್ 8ರಿಂದ 14ರತನಕ ಶೇಣಿ ಶಾಲೆಯಲ್ಲಿ ಉತ್ಸವ

Bdk_Kalotsava

ಪೆರ್ಲ: ಕುಂಬಳೆ ಉಪಜಿಲ್ಲಾ 63ನೇ ಶಾಲಾ ಕಲೋತ್ಸವ ಈ ಬಾರಿ ಶೇಣಿ ಶ್ರೀಶಾರದಾಂಬಾ ಹೈಯರ್ ಸೆಕೆಂಡರಿ ಶಾಲೆಯಲ್ಲಿ ನವೆಂಬರ್ 8ರಿಂದ 14ರತನಕ ಜರುಗಲಿದ್ದು, ಸ್ವಾಗತ ಸಮಿತಿ ರಚನಾ ಸಭೆ ಶಾಲೆಯಲ್ಲಿ ಜರುಗಿತು.

ಎಣ್ಮಕಜೆ ಗ್ರಾ.ಪಂ ಅಧ್ಯಕ್ಷ ಸೋಮಶೇಖರ್ ಜೆ.ಎಸ್. ಉದ್ಘಾಟಿಸಿದರು. ಶೇಣಿ ಶಾಲಾ ಪ್ರಬಂಧಕಿ ಶಾರದಾ ವೈ. ಅಧ್ಯಕ್ಷತೆ ವಹಿಸಿದ್ದರು. ಪುತ್ತಿಗೆ ಗ್ರಾ.ಪಂ ಅಧ್ಯಕ್ಷ ಡಿ.ಸುಬ್ಬಣ್ಣ ಆಳ್ವ, ಜಿ.ಪಂ ಸದಸ್ಯ ನಾರಾಯಣ ನಾಯ್ಕ, ಎಣ್ಮಕಜೆ ಗ್ರಾ.ಪಂ ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ಜಯಶ್ರೀ ಕುಲಾಲ್, ಪುತ್ತಿಗೆ ಗ್ರಾ.ಪಂ ಸದಸ್ಯರಾದ ಆಸೀಫ್ ಆಲಿ, ಕೇಶವ, ಕುಂಬಳೆ ಬಿಪಿಸಿ ಜಯರಾಮ, ಡಯಟ್ ವಿಭಾಗದ ಅನಿಲ್ ಮಣಿಯಮ್ಮ, ಎಚ್.ಎಂ ಫಾರಂ ಕನ್ವೀನರ್ ವಿಷ್ಣುಪಾಲ್, ಮುಖ್ಯಶಿಕ್ಷಕ ರಾಧಾಕೃಷ್ಣ ನಾಯಕ್ ಶೇಣಿ ಮೊದಲಾದವರು ಮಾತನಾಡಿದರು.

ಹೈಸ್ಕೂಲ್ ಮುಖ್ಯಶಿಕ್ಷಕ ಶ್ರೀಶ ಕುಮಾರ್ ಎಂ.ಪಿ ಸ್ವಾಗತ ಸಮಿತಿ ಘೋಷಿಸಿದರು. ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ವಿಲ್ಸನ್ ಡಿಸೋಜ, ಅಬುಬ್ಬಕ್ಕರ್ ಪೆರ್ದನೆ, ಪುಷ್ಪಾ, ಉಮ್ಮರ್ ಕಂಗಿನಮೂಲೆ, ರವೀಂದ್ರನಾಥ ನಾಯಕ್ ಶೇಣಿ ಉಪಸ್ಥಿತರಿದ್ದರು.

ಕುಂಬಳೆ ಉಪಜಿಲ್ಲಾ ಶಿಕ್ಷಣಾಧಿಕಾರಿ ಶಶಿಧರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಪೂರ್ಣಿಮಾ, ಸುರೇಖ ಪ್ರಾರ್ಥನೆ ಹಾಡಿದರು. ಪ್ರಾಂಶುಪಾಲ ಶಾಸ್ತಾ ಕುಮಾರ ಎ. ಸ್ವಾಗತಿಸಿದರು. ಸುಜೀತ ವಂದಿಸಿದರು.

Share This Article

ಬ್ರೆಡ್​​ ಇಲ್ಲದೆ ಮನೆಯಲ್ಲೇ ಮಾಡಿ ಸ್ಯಾಂಡ್ವಿಚ್​; ಇಲ್ಲಿದೆ ಸಿಂಪಲ್​ ವಿಧಾನ | Recipe

ತ್ವರಿತ ಉಪಹಾರಕ್ಕಾಗಿ ಸ್ಯಾಂಡ್ವಿಚ್ ಮಾಡುವುದು ಜನರ ಮೊದಲ ಆಯ್ಕೆಯಾಗಿದೆ. ಮಕ್ಕಳು ಟಿಫಿನ್ ಮುಗಿಸಿ ಅದೇ ಟಿಫಿನ್…

ಒಣದ್ರಾಕ್ಷಿಯಿಂದಾಗುವ ಆರೋಗ್ಯ ಪ್ರಯೋಜನ ಗೊತ್ತಿದೆ; ಮನೆಯಲ್ಲೇ Dry Grapes ತಯಾರಿಸುವ ವಿಧಾನ ಇಲ್ಲಿದೆ | Recipe

ಒಣದ್ರಾಕ್ಷಿ ತಿನ್ನುವುದರಿಂದ ಹಲವಾರು ಪ್ರಯೋಜನಗಳಿವೆ. ಆದರೆ ಒಣದ್ರಾಕ್ಷಿಯಲ್ಲಿ ಯಾವುದೇ ಕಲಬೆರಕೆ ಇಲ್ಲಿದಿದ್ದಾಗ ಮಾತ್ರ ಈ ಪ್ರಯೋಜನ…

ಬಹಳ ಇಷ್ಟಪಟ್ಟು ಪನೀರ್​ ಸೇವಿಸುತ್ತಿದ್ದೀರಾ; ಹಾಗಾದ್ರೆ ನೀವು ತಿಳಿದುಕೊಳ್ಳಲೇಬೇಕಾದ ವಿಷಯ ಇದು.. | Health Tips

ನಾನ್​ವೆಜ್​​​​​​ ಇಷ್ಟಪಡದವರು ಪ್ರೋಟೀನ್​ಗಾಗಿ ಪನೀರ್​​​​ ಅನ್ನು ಹೆಚ್ಚು ಸೇವಿಸುತ್ತಾರೆ. ಆದರೆ ಇದು ನಿಜವಾಗಿಯೂ ಪ್ರೋಟೀನ್‌ಗೆ ಉತ್ತಮವಾದ…