ಯೋಜನೆಯಿಂದ ಸಹಾಯಧನ ಮಂಜೂರು

Published on

ಬಂಟ್ವಾಳ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಂಟ್ವಾಳ ತಾಲೂಕು ತುಂಬೆ ವಲಯದ ಸುಜೀರು ಮಂಗಳ ದೇವಿ ಸ್ವಸಹಾಯ ಸಂಘದ ಸದಸ್ಯೆ ಚಿತ್ರಾಕ್ಷಿ ಎಂಬುವರ ಮಗಳ ಬೆನ್ನುಮೂಳೆ ಶಸ್ತ್ರಚಿಕಿತ್ಸೆಗಾಗಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ 30 ಸಾವಿರ ರೂ. ಸಹಾಯಧನ ಮಂಜೂರಾಗಿದ್ದು, ಮಂಜೂರಾತಿ ಪತ್ರವನ್ನು ಫರಂಗಿಪೇಟೆ ಸೇವಾಂಜಲಿ ಪ್ರತಿಷ್ಠಾನದ ಆಡಳಿತ ಟ್ರಸ್ಟಿ ಕೃಷ್ಣಕುಮಾರ್ ಪೂಂಜ ಇತ್ತೀಚೆಗೆ ಹಸ್ತಾಂತರಿಸಿದರು.

ಸುಕುಮಾರ್ ಅರ್ಕುಳ, ಒಕ್ಕೂಟದ ಅಧ್ಯಕ್ಷೆ ಲೀಡಿಯಾ ಪಿಂಟೋ, ಉಪಾಧ್ಯಕ್ಷ ಸಂತೋಷ್, ತುಂಬೆ ವಲಯದ ಮೇಲ್ವಿಚಾರಕಿ ಮಮತಾ, ತರಬೇತು ಮೇಲ್ವಿಚಾರಕಿ ಜಯಸುಧಾ, ಸೇವಾ ಪ್ರತಿನಿಧಿ ಮಲ್ಲಿಕಾ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net