ಹಳೇ ವಿದ್ಯಾರ್ಥಿ ಸಂಘದಿಂದ 2.50 ಲಕ್ಷ ರೂ ವಿದ್ಯಾರ್ಥಿವೇತನ ವಿತರಣೆ

scholership
ಶಿರ್ವ ಸಂತ ಮೇರಿ ಪಪೂ ಕಾಲೇಜಿನಲ್ಲಿ ವಿದ್ಯಾರ್ಥಿ ವೇತನ ವಿತರಣಾ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು
Published on

ಶಿರ್ವ: ಶಿರ್ವ ಸಂತ ಮೇರಿ ಪಪೂ ಕಾಲೇಜು ಹಳೇ ವಿದ್ಯಾರ್ಥಿ ಸಂಘದಿಂದ ಆರ್ಥಿಕವಾಗಿ ಹಿಂದುಳಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಹಾಗೂ ಉನ್ನತ ಶಿಕ್ಷಣ ಪಡೆಯುತ್ತಿರುವ ಆಯ್ದ ಪ್ರತಿಭಾನ್ವಿತ ಬಡ ವಿದ್ಯಾರ್ಥಿಗಳಿಗೆ 2.50 ಲಕ್ಷ ರೂ.ವಿದ್ಯಾರ್ಥಿ ವೇತನ ವಿತರಣಾ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು.
ಸಂಸ್ಥೆ ಸಂಚಾಲಕ, ಧರ್ಮಗುರು ಡಾ.ಲೆಸ್ಲಿ ಡಿಸೋಜ ವಿದ್ಯಾರ್ಥಿವೇತನ ವಿತರಿಸಿ ಹಳೇ ವಿದ್ಯಾರ್ಥಿಗಳು ಸಂಸ್ಥೆ ಮೇಲೆ ಇಟ್ಟಿರುವ ಪ್ರೀತಿ ವಿಶ್ವಾಸದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಸಂಘದ ಸಾಧನೆ ಶ್ಲಾಘಿಸಿದರು.

ಸಂಘ ಅಧ್ಯಕ್ಷ ನಾರ್ಬರ್ಟ್ ಮಚಾದೊ ಪ್ರಸ್ತಾವನೆಗೈದು, ಸ್ವಾಗತಿಸಿದರು. ವಿದ್ಯಾರ್ಥಿವೇತನ ಸ್ವೀಕರಿಸಿದವರ ಪರವಾಗಿ ನಿತಿನ್ ವಾಗ್ಲೆ, ಆಶ್ಲೇಶ್ ಪ್ರಭು ಮಾತನಾಡಿದರು. ಪ್ರಾಂಶುಪಾಲ ಜಯಶಂಕರ್ ಅಭಿನಂದಿಸಿದರು. ಕೋಶಾಧಿಕಾರಿ ಡಾ.ಗುರುರಾಜ್ ವಿದ್ಯಾರ್ಥಿವೇತನ ಪಡೆದ ವಿದ್ಯಾರ್ಥಿಗಳ ಪಟ್ಟಿ ವಾಚಿಸಿದರು. ಕಾರ್ಯದರ್ಶಿ ಮೋಹನ್ ನೊರೋನ್ಹಾ ವಂದಿಸಿ, ಕಾರ್ಯಕಾರಿ ಸಮಿತಿ ಕೆ.ಆರ್.ಪಾಟ್ಕರ್ ನಿರೂಪಿಸಿದರು. ವಿದ್ಯಾರ್ಥಿಗಳು, ಪಾಲಕರು, ಶಿಕ್ಷಕ ವೃಂದ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net