

ಬೈಂದೂರು: ಉಪ್ಪುಂದ ಜೆಸಿಐನ ಲೋಮ್ ಅಸಿಸ್ಟೆಂಟ್ ಭೇಟಿ ಕಾರ್ಯಕ್ರಮ ಮಾತೃಶ್ರೀ ಸಭಾಭವನದಲ್ಲಿ ನಡೆಯಿತು. ವಲಯ ಉಪಾಧ್ಯಕ್ಷ ವಿಘ್ನೇಶ್ ಪ್ರಸಾದ್ ಘಟಕದ ಕಾರ್ಯಕ್ರಮಗಳಲ್ಲಿ ಗಳಿಸಿರುವ ಅಂಕಗಳ ಕುರಿತು ತಿಳಿಸಿದರು. ಈ ವೇಳೆ ವಲಯ ಉಪಾಧ್ಯಕ್ಷರನ್ನು ಗೌರವಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೇಸಿಐ ಅಧ್ಯಕ್ಷ ಮಂಜುನಾಥ ದೇವಾಡಿಗ ವಹಿಸಿದ್ದರು. ಕಾರ್ಯದರ್ಶಿ ನರಸಿಂಹ, ಸ್ಥಾಪಕಾಧ್ಯಕ್ಷ ಎನ್.ದಿವಾಕರ ಶೆಟ್ಟಿ, ಲೇಡಿ ಜೇಸಿ ಅಧ್ಯಕ್ಷೆ ಸುಮನಾ, ಪೂರ್ವಾಧ್ಯಕ್ಷರಾದ ಉದಯ ಡಿ.ಆರ್., ಮಂಜುನಾಥ, ಸುಧಾಕರ ಡಿ., ರೇಖಾ, ಗುರುರಾಜ ಹೆಬ್ಬಾರ್, ವೇಣುಗೋಪಾಲ ಶೆಟ್ಟಿ ಇದ್ದರು.