ಸಾವರ್ಕರ್ ವಿರುದ್ಧದ ಹೇಳಿಕೆಗೆ ರಾಹುಲ್ ಗಾಂಧಿ ಕ್ಷಮೆ ಕೇಳಬೇಕು… ಇಲ್ಲವಾದರೆ ದೂರು ದಾಖಲಿಸುತ್ತೇನೆ; ರಂಜಿತ್ ಸಾವರ್ಕರ್

Ranjit Savarkar
Published on

ನವದೆಹಲಿ: ಸಾವರ್ಕರ್ ಬಗ್ಗೆ ನೀಡಿದ ಹೇಳಿಕೆಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕ್ಷಮೆಯಾಚಿಸದಿದ್ದರೆ ಅವರ ವಿರುದ್ಧ ಪ್ರಕರಣ ದಾಖಲಿಸುವುದಾಗಿ ವೀರ್ ಸಾವರ್ಕರ್ ಅವರ ಮೊಮ್ಮಗ ರಂಜಿತ್ ಸಾವರ್ಕರ್ ಅವರು ಹೇಳಿದ್ದಾರೆ. ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರು ರಾಹುಲ್ ಗಾಂಧಿಯಲ್ಲಿ ಕ್ಷಮೆ ಕೇಳಲು ಸೂಚನೆ ನೀಡಬೇಕು ಎಂದು ಹೇಳಿದ್ದಾರೆ. ಇದನ್ನೂ ಓದಿ: ಪಿಎಸ್​ಐ ನೇಮಕಾತಿ ಹಗರಣ; ಗರ್ಲ್​ಫ್ರೆಂಡ್ ಸಹಾಯದಿಂದ ತಲೆಮರೆಸಿಕೊಂಡಿದ್ದ PSI ನವೀನ್ ಬಂಧನ

ರಾಹುಲ್ ಗಾಂಧಿ ಅಗೌರವದಿಂದ ಹೇಳಿಕೆಗಳನ್ನು ನೀಡುತ್ತಾರೆ. ಈ ವೇಳೆ ಅವರನ್ನು ಕಾನೂನು ತನಿಖೆಗೆ ಒಳಪಡಿಸುವಂತೆ ಒತ್ತಾಯಿಸುತ್ತೇವೆ ಎಂದು ರಂಜಿತ್ ಸಾವರ್ಕರ್ ಹೇಳಿಕೊಂಡಿದ್ದಾರೆ.

ಸಂಸದ ಸ್ಥಾನದಿಂದ ಅನರ್ಹಗೊಂಡ ಬಳಿಕ ರಾಹುಲ್ ಗಾಂಧಿ ಸುದ್ದಿಗೋಷ್ಠಿ ನಡೆಸಿ ಕಿಡಿಕಾರಿದ್ದರು. ಈ ವೇಳೆ ಮಾತನಾಡುತ್ತಾ ಕ್ಷಮೆ ಕೇಳಲು ನಾನು ಸಾವರ್ಕರ್ ಅಲ್ಲ... ಗಾಂಧಿ. ಗಾಂಧಿ ಯಾವತ್ತೂ ಕ್ಷಮೆ ಕೇಳುವುದಿಲ್ಲ ಎಂದು ಹೇಳಿದ್ದರು. ರಾಹುಲ್ ಆಡಿದ ಈ ಮಾತುಗಳು ಸಾಕಷ್ಟು ಟೀಕೆಗಳಿಗೆ ಕಾರಣವಾಗಿತ್ತು. (ಏಜೆನ್ಸೀಸ್) ಇದನ್ನೂ ಓದಿ: ಒಂದೇ ಒಂದು ತಪ್ಪಿನಿಂದ ಹೊತ್ತಿ ಉರಿದ ಮೊಬೈಲ್ ಅಂಗಡಿ; ರಾತ್ರಿಯಿಡೀ ಮೊಬೈಲ್ ಚಾರ್ಚ್​ ಇಡುವ ಮುನ್ನ ಎಚ್ಚರ! 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net