

ರಿಯಾದ್: ಸೌದಿ ಅರೇಬಿಯಾದ ರಾಜಮನೆತನದ 150 ಮಂದಿ ಸದಸ್ಯರು ಕರೊನಾ ವೈರಸ್ಗೆ ತುತ್ತಾಗಿದ್ದಾರೆ ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ.
ರಾಜಮನೆತನಕ್ಕೆ ಹತ್ತಿರವಾಗಿರುವ ವ್ಯಕ್ತಿಯೊಬ್ಬರು ನ್ಯೂಯಾರ್ಕ್ ಟೈಮ್ಸ್ಗೆ ಮಾಹಿತಿ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ರಾಜಕುಮಾರ ಫೈಸಲ್ ಬಿನ್ ಬಂದರ್ ಬಿನ್ ಅಬ್ದುಲ್ಜಿಜ್ ಅಲ್ ಸೌದ್, ರಾಜ್ ಸಲ್ಮಾನ್ ಅವರಿಗೆ ಸೋಂಕು ಹರಡಿರುವುದು ಪರೀಕ್ಷೆಯಿಂದ ದೃಢಪಟ್ಟಿದೆ.
ಸೌದಿ ರಾಜಮನೆತನದವರು ಇತ್ತೀಚೆಗೆ ಯುರೋಪ್ಗೆ ಪ್ರವಾಸ ತೆರಳಿದ್ದರು. ಈ ವೇಳೆ ಸೋಂಕು ಹರಡಿರಬಹುದು ಎಂದು ವೈದ್ಯರು ಶಂಕೆ ವ್ಯಕ್ತಪಡಿಸಿದ್ದಾರೆ.
ಮೊಹಮ್ಮದ್ ಬಿನ್ ಸಲ್ಮಾನ್ ಮತ್ತು ಅವರ ಮಂತ್ರಿಗಳು ಕೆಂಪು ಸಮುದ್ರದ ಕರಾವಳಿಯಲ್ಲಿ ಪ್ರತ್ಯೇಕವಾಗಿ ಇದ್ದಾರೆ. 84 ವರ್ಷದ ವೃದ್ಧ ರಾಜ ಸಲ್ಮಾನ್ ಜೆಡ್ಡಾ ನಗರದಲ್ಲಿ ಕ್ವಾರಂಟೈನ್ಗೆ ಒಳಗಾಗಿದ್ದಾರೆ.
ಸೌದಿ ಅರೇಬಿಯಾದಲ್ಲಿ ಮಾ.2ರಿಂದಲೇ ಲಾಕ್ಡೌನ್ ಆರಂಭವಾಗಿದೆ. ಸೌದಿ ಅರೇಬಿಯಾದಲ್ಲಿ ವೈರಸ್ ಸೋಂಕಿಗೆ 41 ಮಂದಿ ಮೃತಪಟ್ಟಿದ್ದಾರೆ. 2795 ಮಂದಿಗೆ ಸೋಂಕು ಹರಡಿದೆ.
ಇರಾನ್ ರಾಷ್ಟ್ರದಿಂದ ಸೌದಿಗೆ ಬಂದವರಿಂದ ಸೋಂಕು ಹರಡಿದೆ ಎಂದು ರಾಜಮನೆತನದ ಶಂಕೆ ವ್ಯಕ್ತಪಡಿಸಿದೆ. (ಏಜೆನ್ಸೀಸ್)