ಸೌಡ ಶ್ರೀ ಪುಣ್ಯತಿಥಿ ಆರಾಧನಾ ಮಹೋತ್ಸವ

punya
Published on

ಜನ್ನಾಡಿ: ಶ್ರೀರಾಮಚಂದ್ರ ದೇವಸ್ಥಾನ ಸೌಡ ಸದ್ಗುರು ಶ್ರೀಮದ್ ಸುಧೀಂದ್ರ ತೀರ್ಥ ಶ್ರೀಪಾದಂಗಳವರ ಪುಣ್ಯತಿಥಿ ಆರಾಧನಾ ಮಹೋತ್ಸವ ಜರುಗಿತು.

ದೇವರಿಗೆ ವಿಶೇಷ ಪಂಚಾಮೃತ ಅಭಿಷೇಕ, ಗಂಗಾಭಿಷೇಕ, ಪವಮಾನ ಅಭಿಷೇಕ, ಪುಷ್ಪಾಲಂಕಾರ ಸೇವೆ ಹಾಗೂ ಮಧ್ವಗುರು ಪೂಜಾ, ಗುರುಗಳ ಭಾವ ಚಿತ್ರಕ್ಕೆ ಮಾಲಾರ್ಪಣೆ, ಗುರು ಗುಣಗಾನ ಮತ್ತು ಮಹಾ ಸಮಾರಾಧನೆ ನೆರವೇರಿತು. ರಾತ್ರಿ ದೇವರಿಗೆ ವಸಂತ ಪೂಜೆ ಶ್ರೀ ರಾಮರಕ್ಷಾ ಭಜನಾ ಮಂಡಳಿ ಸೌಡ ಅವರಿಂದ ಭಜನಾ ಸೇವೆ ನಡೆಯಿತು. ದೇವಾಲಯ ಪ್ರಧಾನ ಅರ್ಚಕ ರಾಮಚಂದ್ರ ವಿಠಲ್ ಭಟ್ ಧಾರ್ಮಿಕ ಕಾರ್ಯಕ್ರಮ ನೆರವೇರಿಸಿದರು. ಆಡಳಿತ ಮೊಕ್ತೇಸರರಾದ ಯು.ಕಮಲಾಕ್ಷ ಪೈ ಬಿತ್ಕಲ್‌ಕಟ್ಟೆ, ಪದ್ಮನಾಭ ಭಂಡಾರ್ಕರ್ ಸೌಡ, ದಾಮೋದರ್ ಪೈ ಸೌಡ, ವಿಠ್ಠಲ್ ಪೈ ಸೌಡ, ಮೋಹನ್ ಪ್ರಭು ಬೆಳ್ವೆ, ದೇವಸ್ಥಾನ ಸಮಸ್ತರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net