

ಕುಂದಾಪುರ: ಹಂಗಳೂರಿನ ಹತ್ತನೇ ಸಂತ ಪಿಯೂಸ್ ದೇವಾಲಯದ ವಾರ್ಷಿಕ ಹಬ್ಬದ ಪ್ರಯುಕ್ತ ಸಹೋದರತೆಯ ಬಾಂಧವ್ಯದ ಭಾನುವಾರವನ್ನು ಧರ್ಮಕೇಂದ್ರದ ಧರ್ಮಗುರು ಆಲ್ಬರ್ಟ್ ಕ್ರಾಸ್ತಾ ನೇತೃತ್ವದಲ್ಲಿ ಆಚರಿಸಲಾಯಿತು.
ಬೈಂದೂರು ಧರ್ಮ ಕೇಂದ್ರದ ಸಹಾಯಕ ಧರ್ಮಗುರು ಜೊಸ್ವಿನ್ ಪಿರೇರಾ ನೇತೃತ್ವದಲ್ಲಿ ದಿವ್ಯ ಬಲಿಪೂಜೆ, ಪರಮ ಪವಿತ್ರ ಪ್ರಸಾದದ ಮೆರವಣಿಗೆ ಹಾಗೂ ಪರಮ ಪ್ರಸಾದದ ಆರಾಧನೆ ಹಮ್ಮಿಕೊಳ್ಳಲಾಯಿತು. ಪಾಲನಾ ಮಂಡಳಿ ಉಪಾಧ್ಯಕ್ಷ ಜೇಮ್ಸ್ ಡಿಮೆಲ್ಲೊಧರ್ಮಗುರು ಜೊಸ್ವಿನ್ ಪಿರೇರಾ ಅವರನ್ನು ಗೌರವಿಸಿದರು. ಪಾಲನಾ ಮಂಡಳಿ ಸದಸ್ಯರು, ಗುರಿಕಾರರು, ಸಂಘ ಸಂಸ್ಥೆಗಳ ಸದಸ್ಯರು, ಧರ್ಮ ಕೇಂದ್ರದ ಸದಸ್ಯರು, ಭಕ್ತರು ಉಪಸ್ಥಿತರಿದ್ದರು. ಪಾಲನಾ ಮಂಡಳಿ ಕಾರ್ಯದರ್ಶಿ ರೇಷ್ಮಾ ಡಿಸೋಜ ವಂದಿಸಿದರು.